ಬಾಗಲಕೋಟೆ: ನಗರದ ವಿದ್ಯಾಗಿರಿ ವಲಯ ಸಂಪೂರ್ಣ ಕೇಸರಿಮಯವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲ ಗಣವೇಷಧಾರಿಗಳ ಪಥಸಂಚಲನದ ಹಿನ್ನೆಲೆಯಲ್ಲಿ ಇಡೀ ನಗರ ಬೃಹತ್ ಕಮಾನ್ ಮತ್ತು ಕೇಸರಿ ಧ್ಜಜಗಳಿಂದ ರಾರಾಜಿಸುತ್ತಿದೆ.
ನಗರದಲ್ಲಿನ ಮುಖ್ಯ ಪಥಸಂಚಲನ ಕಾರ್ಯಕ್ರಮದ ಜತೆಗೆ ಕಳೆದ ಎರಡು ವರ್ಷಗಳಿಂದಿಚೆಗೆ ವಿದ್ಯಾಗಿರಿಯಲ್ಲೂ ಪಥಸಂಚಲನ ಕಾರ್ಯಕ್ರಮ ಆರಂಭಗೊಂಡಿದೆ. ಈ ಪಥ ಸಂಚಲನದಲ್ಲಿ 9 ನೇ ತರಗತಿವರೆಗಿನ ಗಣವೇಷಧಾರಿ ಬಾಲಕರು ಭಾಗವಹಿಸಲು ಅವಕಾಶವಿದೆ.
ನಾಳೆ ನಡೆಯಲಿರುವ ಪಥಸಂಚಲನಕ್ಕೆ ವಿದ್ಯಾಗಿರಿಯ ಎಲ್ಲ ರಸ್ತೆಗಳು, ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್ ವೃತ್ತ ಹಾಗೂ ಕಟ್ಟಡಗಳ ಮೇಲೆ ಕೇಸರಿ ಧ್ವಜಗಳ ಹಾರಾಟ ಕಾಣಿಸುತ್ತಿದೆ. ರಸ್ತೆಯುದ್ದಕ್ಕೂ ಬೃಹತ್ ಪ್ರಮಾಣದ ಕಮಾನ್ಗಳನ್ನು ರಚಿಸಲಾಗಿದೆ. ಭಾರತ ಮಾತೆಯ ಭಾವಚಿತ್ರದ ಬೃಹತ್ ಪ್ಲೆಕ್ಸ್ಗಳು ರಾರಾಜಿಸುತ್ತಿವೆ.
ಭಾನುವಾರ ಸಂಜೆ ನಡೆಯಲಿರುವ ಪಥ ಸಂಚಲನ ಕಾರ್ಯಕ್ರಮದಲ್ಲಿ ೪೦೦ ಜನ ಗಣವೇಷಧಾರಿ ಬಾಲಕರು ಭಾಗವಹಿಸಲಿದ್ದಾರೆ. ಬಸವೇಶ್ವರ ವೃತ್ತದ ಬಳಿಯ ಅಥಣಿ ಕಲ್ಯಾಣ ಮಂಟಪದಿಂದ ಆರಂಭಗೊಳ್ಳಲಿರುವ ಪಥಸಂಚಲನ ವಿದ್ಯಾಗಿರಿ ಸಿಬಿಎಸ್ಇ ಸ್ಕೂಲ್ ರಸ್ತೆ, 9ನೇ ಕ್ರಾಸ್, ಕೆಂಚಮ್ಮ ದೇವಸ್ಥಾನ ರಸ್ತೆ ಮೂಲಕ 19 ನೇ ಕ್ರಾಸ್ನ ಮುಖ್ಯರಸ್ತೆ, 22 ನೇ ಕ್ರಾಸ್ ಮೂಲಕ ಎಂಜಿನಿಯರಿಂಗ್ ಕಾಲೇಜ್ ವೃತ್ತಕ್ಕೆ ಆಗಮಿಸಲಿದೆ. ಅಲ್ಲಿಂದ ಕಾಲೇಜ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಬಳಿಕ ಸಾರ್ವಜನಿಕ ಸಭೆ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ವಿಜಯಪುರ ವಿಭಾಗ ಕಾರ್ಯಕಾರಿಣಿ ಸದಸ್ಯರಾದ ಅಮರನಾಥ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಪೊಲೀಸ್ ಬಂದೋಬಸ್ತ್ ಕಾರ್ಯ ನಡೆದಿದೆ. ಭಾನುವಾರ ಪೊಲೀಸ್ ಬಲ ಇನ್ನಷ್ಟು ಹೆಚ್ಚಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.