ಪುತ್ತೂರು: ಈವರೆಗೆ ಅಷ್ಟಾಗಿ ಪ್ರಚಲಿತದಲಿಲ್ಲದೆ ಮರೆಯಾಗಿರುವ ಕರ್ನಾಟಕ ಮತ್ತು ತಮಿಳ್ನಾಡು ರಾಜರ ಆಸ್ಥಾನ ಪರಂಪರೆಗಳಲ್ಲಿದ್ದ ಹಳೆಯ ನೃತ್ಯಬಂಧಗಳ ನವೀಕರಣದ ಪ್ರಯುಕ್ತ ಮೇ 25 ಹಾಗೂ 26 ರಂದು ರಾಜ್ಯಮಟ್ಟದ 2 ದಿನಗಳ ಕಾರ್ಯಾಗಾರವು ನೂಪುರ ಭ್ರಮರಿ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿದೆ.
ನೂಪುರ ಭ್ರಮರಿ (ರಿ) ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ)ಯ ಸಹಯೋಗದಲ್ಲಿ ನಡೆಯುತ್ತಿರುವ ವಿನೂತನ ಮಾರ್ಗದರ್ಶಿ ಪ್ರಯತ್ನಗಳ ಪೈಕಿ ಈ ವರ್ಷ ಕರ್ನಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ ನೃತ್ಯಪ್ರಂಪರೆಯಲ್ಲಿ ಚಾಲ್ತಿಯಲ್ಲಿದ್ದ ಹಳೆಯ ನೃತ್ಯಬಂಧಗಳ ಪುನರ್ ನವೀಕರಣವೂ ಒಂದಾಗಿದೆ. ಈ ಕಾಲಕ್ಕೆ ಮರೆಯಾಗಿರುವ ರಾಜಾಶ್ರಯ ಮತ್ತು ಆಲಯ ನೃತ್ಯಪದ್ಧತಿಗಳಲ್ಲಿ ಬೆಳೆದುಬಂದ ವಿಶೇಷವಾದ ಪಾರಂಪರಿಕ ನೃತ್ಯಬಂಧಗಳು-ಸ್ವರಸರಿ, ವಳವೂರು ತೋಡಯಂ, ನಾಂದೀ ಸ್ವನ, ರಾಗಾನುರಾಗತಿ ನೃತ್ತ, ಉಪೋದ್ಘಾತ ಬಂಧ, ಸ್ವರಜತಿ, ನಾಟ್ಯಶಾಸ್ತ್ರಾಧಾರಿತ ಕೌತ್ವ-ಶಬ್ದ-ಶ್ಲೋಕಗಳು ಇವುಗಳ ಪೈಕಿ ಪ್ರಮುಖವೆನಿಸಿವೆ. ಶಾಸ್ತ್ರ ಮತ್ತು ಪ್ರಯೋಗ ತರಗತಿಗಳೆರಡನ್ನೂ ಇದಕ್ಕಾಗಿ ವಿನ್ಯಾಸ ಮಾಡಲಾಗಿದ್ದು; ಅಭ್ಯರ್ಥಿಗಳ ವಯಸ್ಸು ಮತ್ತು ಅರ್ಹತೆಗಳನ್ನಾಧರಿಸಿ ತಂಡಗಳ ವಿಭಾಗದಲ್ಲಿ ಕಲಿಕೆಯನ್ನು ನಡೆಸಲಾಗುವುದು. ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.
ಸ್ಥಳ : ಕಲಾಶ್ರಯ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ದರ್ಬೆ, ಪುತ್ತೂರು
ಶುಲ್ಕ: 1400 ರೂ.ಗಳು
ಆಸಕ್ತರು ಸಂಪರ್ಕಿಸಿ: 9964140927 ಅಥವಾ www.noopurabhramari.com
ಭರತನಾಟ್ಯದ ಅಲರಿಪ್ಪುವಿನಿಂದ ಮೊದಲ್ಗೊಂಡು ತಿಲ್ಲಾನದ ವರೆಗೆ ಸಾಗುವ ಎಂದಿನ ಮಾರ್ಗಪದ್ಧತಿಯ ನಡುವೆಯೇ ಈ ಮಾದರಿಯ ಹಳೆಯ ಸಂಪ್ರದಾಯದ ಪುನರ್ ಶೋಧನೆ ಮತ್ತು ಅವುಗಳ ಸೃಷ್ಟಿಶೀಲ ಪ್ರಯೋಗ ಇದಾಗಿದೆ. ಕಳೆದ ವರ್ಷ ನಾಟ್ಯಶಾಸ್ತ್ರದ ಆಧಾರದಲ್ಲಿ ನಾಟ್ಯಚಿಂತನ ಎಂಬ ಕಾರ್ಯಕ್ರಮವೂ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಕರಾವಳಿಯಲ್ಲೇ ಮೊದಲ ಬಾರಿಗೆ ಆಯೋಜನೆಗೊಂಡು ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.