ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಭಾರತದ ಹಲವಾರು ಗ್ರಾಮಗಳು ಇನ್ನೂ ಕತ್ತಲಲ್ಲೇ ಇವೆ. ವಿದ್ಯುತ್ ದೀಪ ಇನ್ನೂ ಅವುಗಳಿಗೆ ಅಪರಿಚಿತವಾಗಿವೆ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಐಐಟಿ-ಮದ್ರಾಸ್ ತೆಲಂಗಾಣದ ನಳಗೊಂಡ ಜಿಲ್ಲೆಯ ದೇವರಕೊಂಡ ಮಂಡಲ್ನ 300 ಮನೆಗಳಿಗೆ ವಿದ್ಯುತ್ ಒದಗಿಸಿದ ಸಾಧನೆ ಮಾಡಿದೆ.
‘ಇನ್ವರ್ಟರ್ಲೆಸ್ ಸಿಸ್ಟಮ್’ ಎಂದು ಕರೆಯಲ್ಪಡುವ ಸೋಲಾರ್ ಆಧಾರಿ ತಂತ್ರಜ್ಞಾನವನ್ನು ಅಳವಡಿಸಿ ಈ ಮನೆಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ. ಈ ತಂತ್ರಜ್ಞಾನವನ್ನು ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದೆ. ಸಿಗ್ನಿ ಎನರ್ಜಿ ಪ್ರೈ.ಲಿ ಇದನ್ನು ವಾಣಿಜ್ಯೀಕರಣಗೊಳಿಸುತ್ತಿದೆ.
ತೆಲಂಗಾಣ ವಿದ್ಯುತ್ ಹಂಚಿಕಾ ಕಂಪನಿ ಮತ್ತು ಗ್ರಾಮೀಣ ವಿದ್ಯುತ್ ಮಂಡಳಿಯ ಸಹಭಾಗಿತ್ವದೊಂದಿಗೆ ಐಐಟಿ ಈ ಪ್ರಾಜೆಕ್ಟ್ನ್ನು ಕೈಗೆತ್ತಿಕೊಂಡಿತು. ಇದರಿಂದಾಗಿ ಹಲವಾರು ಭಾಗಗಳು ನಿರಂತರವಾದ ವಿದ್ಯುತ್ ಪಡೆಯುತ್ತಿವೆ.
125 Wp ಸೋಲಾರ್ ಪ್ಯಾನಲ್, 1kWh ಬ್ಯಾಟರಿ, ಇನ್ವರ್ಟರ್ ಕಂಟ್ರೋಲರ್ ಯುನಿಟ್, ಡಿಸಿ ಲೋಡ್ಗಳನ್ನು ಈ ತಂತ್ರಜ್ಞಾನ ಹೊಂದಿದೆ. ಇದು ಡಿಸಿ ಫ್ಯಾನ್, ಡಿಸಿ ಟ್ಯೂಬ್ಲೈಟ್, 2 ಡಿಸಿ ಬಲ್ಬ್, ಡಿಸಿ ಮೊಬೈಲ್ ಚಾರ್ಜರ್, ಸಿಡಿ ಪವರ್ ಸಾಕೆಟ್ಗಳಿಗೆ ವಿದ್ಯುತ್ ನೀಡುವ ಸಾಮರ್ಥ್ಯ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.