ನವದೆಹಲಿ: 3ನೇ ಅತೀದೊಡ್ಡ ಕಾಫಿ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿರುವ ಭಾರತ ಇದೀಗ ವಿಶ್ವದ ಅತೀ ದುಬಾರಿ ಕಾಫಿಯ ಉತ್ಪಾದನೆಯನ್ನು ಆರಂಭಿಸಿದೆ.
ಸಿವೆಟ್ ಕ್ಯಾಟ್(ಪುನುಗು ಬೆಕ್ಕು)ನ ಲದ್ದಿಯಿಂದ ಈ ಕಾಫಿಯನ್ನು ತಯಾರಿಸಲಾಗುತ್ತಿದ್ದು, ಕರ್ನಾಟಕದ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದ ಈ ದುಬಾರಿ ಕಾಫಿಯನ್ನು ಉತ್ಪಾದನೆ ಮಾಡಲಾಗುತ್ತಿದೆ. ಗಲ್ಫ್ ರಾಷ್ಟ್ರ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಈ ಕಾಫಿಗೆ ಬಾರೀ ಬೇಡಿಕೆ ಇದೆ.
ಸಿವೆಟ್ ಕಾಫಿ ಅಥವ ಲುವಾರ್ಕ್ ಕಾಫಿ ಎಂದು ಇದು ಪ್ರಸಿದ್ಧಿಯಾಗಿದ್ದು, ವಿದೇಶಗಳಲ್ಲಿ ಕೆಜಿಗೆ 20 ಸಾವಿರ-25 ಸಾವಿರ ರೂಪಾಯಿ ಇದೆ.
ದೇಶದ ಅತೀದೊಡ್ಡ ಕಾಫಿ ಉತ್ಪಾದಕ ರಾಜ್ಯವಾದ ಕರ್ನಾಟಕದ ಸ್ಟಾರ್ಟ್ಅಪ್ ಸಂಸ್ಥೆ ಕೂರ್ಗ್ ಕನ್ಸೋಲಿಡೇಟೆಡ್ ಕಮೋಡಿಟಿಸ್(ಸಿಸಿಸಿ) ಈ ದುಬಾರಿ ಕಾಫಿಯ ಉತ್ಪಾದನೆಯನ್ನು ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.