ನವದೆಹಲಿ: ದೇಶದಲ್ಲಿ ಶೇ.20ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದ ಕಾರಣಕ್ಕೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇವಲ 500 ಗ್ರಾಂ ತೂಕದ ಹೊಸ ವಿನ್ಯಾಸದ ಹೆಲ್ಮೆಟ್ನ್ನು ಹೊರ ತರುತ್ತಿದೆ.
ಹೆಚ್ಚಿನ ತೂಕದ ದೊಡ್ಡ ಹೆಲ್ಮೆಟ್ಗಳನ್ನು ಸವಾರರು ಧರಿಸಲು ಹಿಂಜರಿಯುತ್ತಾರೆ. ಈ ಹಿನ್ನಲೆಯಲ್ಲಿ ಕಡಿಮೆ ತೂಕದ ಹೆಲ್ಮೆಟ್ನ್ನು ಪರಿಚಯಿಸಲು ಮುಂದಾಗುತ್ತಿದೆ.
ಸಚಿವಾಲಯವು ಹೊಸ ವಿನ್ಯಾಸದ ಹೆಲ್ಮೆಟ್ ತಯಾರಿಸಲು ಸಮಿತಿಯೊಂದನ್ನು ರಚಿಸಿದೆ. ಇವುಗಳು ಕೇವಲ 500 ಗ್ರಾಂ ತೂಕ ಇರಲಿದೆ. ಈಗಿರುವ ಹೆಲ್ಮೆಟ್ಗಳು 1000-1800ಗ್ರಾಂ ತೂಕವಿದೆ.
ದೇಶದಲ್ಲಿ ಒಟ್ಟು 52,500 ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತದೆ. ಇವುಗಳ ಪೈಕಿ 10,135 ಅಪಘಾತಗಳು ಹೆಲ್ಮೆಟ್ ಧರಿಸದ ಕಾರಣಕ್ಕೆ ಸಂಭವಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.