×
Home About Us Advertise With s Contact Us

ಶ್ರೀರಾಮ ಕ್ಷೇತ್ರದ ಮಹಾ ಬ್ರಹ್ಮರಥೋತ್ಸವ ಸಂಪನ್ನ

Belthangady NEWSಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮಾ.21 ರಿಂದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ, ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದು ಇಂದು ಮಹಾ ಬ್ರಹ್ಮರಥೋತ್ಸವ ಸಂಪನ್ನಗೊಳ್ಳಲಿದೆ.

ಪ್ರಾತಃಕಾಲ 55ನೇ ವರ್ಷದ ಶ್ರೀರಾಮ ತಾರಕ ಮಂತ್ರಯಜ್ಞಕ್ಕೆ ಮಂಗಳವಾಗಲಿದೆ. ಬಳಿಕ ಹಗಲು ಉತ್ಸವ ನಡೆಯಲಿದೆ. ಸಂಜೆ 7ಗಂಟೆಗೆ ಶ್ರೀ ದೇವರ ಪಾಲಕಿ ಬಲಿ ಉತ್ಸವ ಬಳಿಕ ಮಹಾ ಬ್ರಹ್ಮರಥೋತ್ಸವ  ನಡೆಯಲಿದೆ. ನಂತರಕ್ಷೇತ್ರದರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನೆರವೇರಲಿದೆ. ಈ ಸಂದರ್ಭ ವಿವಿಧಜನಪ್ರತಿನಿಧಿಗಳು, ಗಣ್ಯರು, ಅನ್ಯಾನ್ಯಕ್ಷೇತ್ರದ ಮುಖಂಡರುಗಳು, ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

 

Recent News

Pungava 01-10-2018
24 hours ago  
Back To Top
error: Content is protected !!