×
Home About Us Advertise With s Contact Us

‘ವಂದೇಮಾತರಂ’ ಕಡ್ಡಾಯಗೊಳಿಸಲು ಕಾನೂನು ತರಬೇಕು : ಉದ್ಧವ್ ಠಾಕ್ರೆ

ಮುಂಬಯಿ : ರಾಷ್ಟ್ರೀಯ ಹಾಡು ವಂದೇಮಾತರಂ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಇದೇ ಸಂದರ್ಭದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಂದೇಮಾತರಂಗೆ ಕಾನೂನೊಂದನ್ನು ಜಾರಿಗೊಳಿಸಬೇಕು ಎಂದಿದ್ದಾರೆ.

ಎಲ್ಲಾ ಜನರು ವಂದೇಮಾತರಂ ಎಂದು ಪ್ರತಿದಿನ ಹೇಳಬೇಕು. ಈ ನಿಟ್ಟಿನಲ್ಲಿ ಕಾನೂನನ್ನು ತರಬೇಕು. ವಂದೇಮಾತರಂನ್ನು ರಾಜಕೀಯಗೊಳಿಸದೆ ಕಾನೂನಡಿ ಅದನ್ನು ತರುವ ಬಗ್ಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ.

ಮುಂಬೈ ಬೃಹತ್ ಮಹಾನಗರ ಪಾಲಿಕೆಯಲ್ಲಿ ವಂದೇಮಾತರಂ ಕಡ್ಡಾಯಗೊಳಿಸಿದ ಬಗ್ಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

 

Recent News

Back To Top
error: Content is protected !!