ನವದೆಹಲಿ: ನಿರ್ಗಮಿಸಲಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಗುರುವಾರ ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಪಕ್ಷ ಬೇಧ ಮರೆತು ಎಲ್ಲರೂ ಅವರ ಕಾರ್ಯ ಮತ್ತು ಕೊಡುಗೆಗಳನ್ನು ಕೊಂಡಾಡಿದರು.
ಈ ವೇಳೆ ಮಾತನಾಡಿದ ಮೋದಿ, ‘ನಿಮ್ಮ ರಾಜತಾಂತ್ರಿಕ ಒಳನೋಟಗಳು ಅದರಲ್ಲೂ ದ್ವಿಪಕ್ಷೀಯ ಭೇಟಿಗಳಿಗೂ ಮುನ್ನ ಮತ್ತು ನಂತರ ನಿಮ್ಮೊಂದಿಗೆ ನಡೆಸಿದ ಚರ್ಚೆಗಳು ಮೌಲ್ಯಯುತವಾದುದು. ನೀವು ವೃತ್ತಿ ರಾಜತಾಂತ್ರಿಕ, ಅದು ಏನೆಂಬುದು ಪ್ರಧಾನಿಯಾದ ಬಳಿಕ ತಿಳಿಯಿತು. ನಿಮ್ಮನ್ನು ನೋಡಿ ವೃತ್ತಿ ರಾಜತಾಂತ್ರಿಕನ ನಡವಳಿಕೆಗಳನ್ನು ತಿಳಿದುಕೊಂಡೆ’ ಎಂದಿದ್ದಾರೆ.
ಅನ್ಸಾರಿ ಅವರು ಅತ್ಯಮೂಲ್ಯ ನೆನಪುಗಳೊಂದಿಗೆ ವಿದಾಯ ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ನೀವು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಶ್ರೇಷ್ಠ ಕುಟುಂಬಕ್ಕೆ ಸೇರಿದವರು. ನಿಮ್ಮ ಬಗ್ಗೆ ನನಗೆ ವಿಶೇಷ ಆದರತೆ ಇದೆ, ನನ್ನ ಕಡೆಯಿಂದ ನಿಮಗೆ ಶುಭ ಆಶಯಗಳು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.