ಬೆಂಗಳೂರು: ಕಟುಕರ ಪಾಲಾಗುವ ಗೋವನ್ನು ರಕ್ಷಿಸಿ ಗೋಶಾಲೆಗಳಲ್ಲಿ ಪಾಲಿಸುವ ಗೋಸಂಜೀವಿನಿ ಎಂಬ ವಿಶೇಷ ಕಾರ್ಯಯೋಜನೆಯನ್ನು ಶ್ರೀರಾಮಚಂದ್ರಾಪುರ ಮಠದ ಹಮ್ಮಿಕೊಂಡಿದೆ. ಇದಕ್ಕೆ ಇಡೀ ಸಮಾಜ ಕೈಜೋಡಿಸಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀರಾಘವೇಶ್ವರಭಾರತೀಸ್ವಾಮೀಜಿ ಕೋರಿದರು.
ತಮಿಳುನಾಡಿನ ಆಡಿಯಲ್ಲಿ ನಡೆಯುವ ಜಾನುವಾರು ಜಾತ್ರೆಯಲ್ಲಿ ಸಾವಿರಾರು ಗೋವುಗಳು ರೈತರಿಂದ ಕಟುಕರ ಪಾಲಾಗುತ್ತವೆ. ಇದನ್ನು ತಪ್ಪಿಸಿ, ಗೋವುಗಳನ್ನು ರೈತರಲ್ಲೇ ಉಳಿಸುವ ಆಂದೋಲನಕ್ಕೆ ಶ್ರೀಮಠ ಇಂದಿನಿಂದಲೇ ಚಾಲನೆ ನೀಡಿದೆ ಎಂದು ಘೋಷಿಸಿದರು.
ವಿಜಯನಗರದ ಗಾಂಧಿಪಾರ್ಕ್ನಲ್ಲಿ ಆಯೋಜಿಸಿದ್ದ ಅಭಯಾಕ್ಷರ- ಹಾಲುಹಬ್ಬದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಅಭಯಾಕ್ಷರ- ಹಾಲುಹಬ್ಬ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತಿದ್ದು, ಹಲವಾರು ಮಕ್ಕಳು ಇದರಿಂದ ಪ್ರೇರಣೆ ಪಡೆದು ಹಸ್ತಾಕ್ಷರ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಭಾರತೀಯ ಗೋಪರಿವಾರ ಹಾಗೂ ಶ್ರೀಮಠದ ಸಾವಿರಾರು ಕಾರ್ಯಕರ್ತರು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಗೋವುಗಳನ್ನು ಉಳಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವರು ಎಂದು ಸ್ವಾಮೀಜಿ ನುಡಿದರು.
ಗೋಸಂರಕ್ಷಣೆ ಆಂದೋಲನ ಮಹಾಗಂಗೆಯಾಗಿ ದೇಶದಲ್ಲಿ ಬೆಳೆಯುತ್ತಿದ್ದು, ಸಮಾಜದ ಸಮಸ್ತರೂ ಬಿಂದುಗಳಾಗಿ ಇದರಲ್ಲಿ ಪಾಲ್ಗೊಳ್ಳಿ. ಮುಂದಿನ ಆರೆಂಟು ತಿಂಗಳಲ್ಲಿ ಈ ಮಹಾ ಅಭಿಯಾನ ರಾಜ್ಯದ ಪ್ರತಿ ಮನೆಮನೆಯನ್ನು ತಲುಪಲಿದೆ ಎಂದರು,
ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ವಿ.ಸೋಮಣ್ಣ, “ಗೋವು ರಾಷ್ಟ್ರದ ಸಂಪತ್ತು. ಇದರ ರಕ್ಷಣೆ ನಮ್ಮೆಲ್ಲರ ಹೊಣೆ. ಗೋವಿನ ಮಹತ್ವವನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಶ್ರೀ ರಾಮಚಂದ್ರಾಪುರ ಮಠ ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದೆ. ಪ್ರತಿ ಮನೆಯಲ್ಲೂ ಗೋವು ಬೆಳೆಸುವ ಬಗ್ಗೆಪ್ರತಿಯೊಬ್ಬರೂ ಪಣ ತೊಡಬೇಕು” ಎಂದು ಕರೆ ನೀಡಿದರು.
“ಭಾರತೀಯತೆ, ಸತ್ಸಂಕಲ್ಪ, ಗೋಸಂಸ್ಕøತಿ ಉಳಿಸುವಲ್ಲಿ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಪ್ರತಿ ಕ್ಷಣವನ್ನೂ ಮುಡಿಪಾಗಿಟ್ಟಿದ್ದಾರೆ” ಎಂದು ಬಣ್ಣಿಸಿದರು. ಶ್ರೀಚಕ್ರ ಶಕ್ತಿಪೀಠದ ಶ್ರೀಮಠಂ ನಾಗರಾಜು ಸ್ವಾಮೀಜಿ ಆಶೀರ್ವಚನ ನೀಡಿದರು.
ಖ್ಯಾತ ಚಿತ್ರನಟ ಸುಂದರರಾಜ್ ಮಾತನಾಡಿ, “ಪಾಶ್ಚಿಮಾತ್ಯ ಜೀವನಕ್ರಮದ ಪ್ರಭಾವದಿಂದ ಭಾರತದ ಸಾಂಪ್ರದಾಯಿಕ ಸಂಸ್ಕøತಿ ಮತ್ತು ಗೋವಂಶಕ್ಕೆ ಅಪಾಯ ಬಂದೊದಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಗೋಸಂರಕ್ಷಣೆ ಅನಿವಾರ್ಯ. ಭಾರತದಿಂದ ಒಂದು ಕೋಟಿ ಟನ್ ಗೋಮಾಂಸ ರಫ್ತಾಗುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಗೋಮಾಂಸ ರಫ್ತು ಮಾಡುವ ದೇಶಗಳ ಪೈಕಿ ಭಾರತಕ್ಕೆ ಮೂರನೇ ಸ್ಥಾನ. ಇದು ನಮ್ಮೆಲ್ಲರಿಗೆ ನಾಚಿಕೆಗೇಡು” ಎಂದರು.
ಅಭಯಾಕ್ಷರ ಅಭಿಯಾನಕ್ಕೆ ಕಲಾವಿದರು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಚಿತ್ರನಟ ಶ್ರೀನಾಥ್ ವನಿಷ್ಠ ಈ ಸಂದರ್ಭ ಭರವಸೆ ನೀಡಿದರು. ಬರ ಪರಿಸ್ಥಿತಿ ಹಾಗೂ ಹವಾಮಾನ ವೈಪರೀತ್ಯಗಳಿಗೆ ಗೋಪಾಲನೆ ಸ್ಥಗಿತವಾಗಿರುವುದು ಕಾರಣ ಎಂದು ಖ್ಯಾತ ಕಾದಂಬರಿಕಾರ್ತಿ ಪ್ರೇಮಾಭಟ್ ಅಭಿಪ್ರಾಯಪಟ್ಟರು. ಗಂಗಾ ಹಾಗೂ ಗೋವು ದೇಶದ ಹೆಮ್ಮೆ. ಇದಕ್ಕೆ ಸಂಕಷ್ಟ ಬಂದಿದೆ. ಇದನ್ನು ನಿವಾರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಉದ್ಯಮಿ ಮಹೇಂದ್ರ ಮುನ್ನೋಟ್ ನುಡಿದರು.
ಪಾಲಿಕೆ ಸದಸ್ಯರಾದ ಲತಾ ಗೋಪಿನಾಥ್, ಎಚ್.ರವೀಂದ್ರ, ಕೆನಡಾ ಕನ್ನಡ ಸಂಘದ ಹರೀಶ್, ಸಮಾಜಸೇವಕ ಹರೀಶ್ ದೇಸಾಯಿ, ಉದ್ಯಮಿ ಮಹೇಂದ್ರ ಮುನ್ನೋಟ್ ಉಪಸ್ಥಿತರಿದ್ದರು. ಮಾ ಗೋ ಪ್ರಾಡೆಕ್ಟ್ಸ್ನ ಅರ್ಜುನ ಘೃತವನ್ನು ಈ ಸಂದರ್ಭ ಲೋಕಾರ್ಪಣೆ ಮಾಡಲಾಯಿತು.
ಅಭಯಾಕ್ಷರ ಹಾಲುಹಬ್ಬದ ಅಂಗವಾಗಿ ಗೋಜನ್ಯ ವಸ್ತುಗಳ ಬೃಹತ್ ಪ್ರದರ್ಶನ ಆಯೋಜಿಸಲಾಗಿತ್ತು. ಇದರಲ್ಲಿ ಸಾವಯವ ತರಕಾರಿ ಮಾರಾಟ ಮಾಡಿ ಬಂದ ಹಣವನ್ನು ಗೋಸಂರಕ್ಷಣೆಗಾಗಿ ನೀಡುವುದಾಗಿ ಹೇಳುವ ಮೂಲಕ ಮೂರನೇ ತರಗತಿಯ ಪುಟ್ಟ ಬಾಲಕಿಯೊಬ್ಬಳು ಹೇಳುವ ಮೂಲಕ ಎಲ್ಲ ಗೋಪ್ರೇಮಿಗಳ ಗಮನ ಸೆಳೆದಳು. ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಕೂಡಾ ಬಾಲಕಿಯನ್ನು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.