ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ವಾಟ್ಸಾಪ್ ಇದೀಗ ದಾಖಲೆ ಮುರಿಯುವ ಮಟ್ಟಕ್ಕೇರಿದೆ. 2009ರಲ್ಲಿ ಆರಂಭಗೊಂಡ ವಾಟ್ಸಾಪ್ ಬಹಳಷ್ಟು ದೂರ ಸಾಗಿದ್ದು, ಇದೀಗ ಅದರ ಬಳಕೆದಾರರ ಸಂಖ್ಯೆ ದಿನಕ್ಕೆ 1 ಬಿಲಿಯನ್ ತಲುಪಿದೆ.
2014ರಲ್ಲಿ ವಾಟ್ಸಾಪ್ನ್ನು 19 ಬಿಲಿಯನ್ ಡಾಲರ್ ನೀಡಿ ಫೇಸ್ಬುಕ್ ಖರೀದಿ ಮಾಡಿತ್ತು. ಕಳೆದ ವರ್ಷ ತಿಂಗಳಿಗೆ ಬಳಕೆದಾರರ ಸಂಖ್ಯೆ 1 ಬಿಲಿಯನ್ ದಾಟಿದೆ ಎಂದು ಅದು ಘೋಷಿಸಿತ್ತು.
ಇದೀಗ ಜಗತ್ತಿನಾದ್ಯಂತ ದಿನಕ್ಕೆ 1 ಬಿಲಿಯನ್ ಜನರು ವಾಟ್ಸಾಪ್ ಬಳಸುತ್ತಿದ್ದಾರೆ ಎಂದು ಸಂಸ್ಥೆ ಘೋಷಿಸಿದೆ.
‘ಜಗತ್ತಿನಾದ್ಯಂತ ದಿನಕ್ಕೆ 1 ಬಿಲಿಯನ್ ಜನ ತಮ್ಮ ಸಂಬಂಧಿಕರು, ಸ್ನೇಹಿತರೊಂದಿಗೆ ಸಂಪರ್ಕದಲಿರಲು ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ ಎನ್ನಲು ಹೆಮ್ಮೆ ಎನಿಸುತ್ತದೆ’ ಎಂದು ಸಂಸ್ಥೆ ಬ್ಲಾಗ್ ಪೋಸ್ಟ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.