ಹುಬ್ಬಳ್ಳಿ: ಯೂಥ್ ಫಾರ್ ಸೇವಾ ಸಂಸ್ಥೆಯಿಂದ ತಾಲೂಕಿನ ಸರ್ಕಾರಿ ಶಾಲೆಯಲ್ಲಿ 850 ಬಡಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣಾ ಕಾರ್ಯಕ್ರಮ ಜುಲೈ 1 ರಂದು ಇಲ್ಲಿನ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಾಂತೇಶ ಕಂಟೆಪ್ಪನವರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂಥ್ ಫಾರ್ ಸೇವಾ ಸಂಸ್ಥೆಯು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಕಳೆದ ವರ್ಷ ಬೆಂಗಳೂರು ಸೇರಿಂದತೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಒಟ್ಟು 5 ಸಾವಿರ ಸ್ಕೂಲ್ ಕಿಟ್ಗಳನ್ನು ವಿತರಣೆ ಮಾಡಿದೆ ಎಂದು ತಿಳಿಸಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸ್ಕೂಲ್ ಕಿಟ್ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಒಟ್ಟು 850 ಕಿಟ್ಗಳನ್ನು ನೀಡಲಾಗುತ್ತಿದ್ದು, ಹುಬ್ಬಳ್ಳಿ ನಗರದ ಆಯ್ದ ಸರ್ಕಾರಿ ಶಾಲೆಗಳ 500 ಬಡ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ 350 ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಜುಲೈ 1 ರಂದು ನಡೆಯುವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲಿಕೆ ಮಹಾಪೌರ ಡಿ.ಕೆ. ಚೌವ್ಹಾಣ್ ಅವರು ಪಾಲ್ಗೊಳ್ಳುವರು. ಗೌರವ ಅತಿಥಿಯಾಗಿ ಜಿತೇಂದ್ರ ಮಜೇಥಿಯಾ, ಕೈಗಾರಿಕೊದ್ಯಮಿ ಎಂ.ವಿ. ಕರಮರಿ ಹಾಗೂ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಕಿರಣ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವೀಣಾ ಭಟ್, ಗಿರೀಶ ತೆಗ್ಗಿನಮಠ, ಸಚಿನ್ ಕಾಮತ್ ಮತ್ತು ಲಕ್ಷ್ಮಣ ಇತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.