ಜಕಾರ್ತ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಜಕಾರ್ತದಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದುಕೊಂಡಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಅವರು ಥಾಯ್ಲೆಂಡ್ನ ವಿಶ್ವ ನಂ.20 ಆಟಗಾರ್ತಿ ಪೋರ್ನುಪವೀ ಚೊಚುವಾಂಗ್ ಅವರನ್ನು 21-12, 21-19ಲ್ಲಿ ಸೋಲಿಸಿದರು.
ರಿಯೋ ಒಲಿಂಪಿಕ್ನ ಬೆಳ್ಳಿ ಪದಕ ವಿಜೇತೆ ಸಿಂಧು ಈ ಸೀಸನ್ನಲ್ಲಿ ಸೈಯದ್ ಮೋದಿ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಮತ್ತು ಇಂಡಿಯಾ ಸೂಪರ್ ಸಿರೀಸ್ನ್ನು ಗೆದ್ದುಕೊಂಡಿದ್ದು, ಇಂಡೋನೇಷ್ಯಾ ಸೂಪರ್ ಸಿರಿಸ್ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ. ಮುಂದಿನ ಹಂತದಲ್ಲಿ ಅವರು ಅಮೆರಿಕಾದ ಬೀವೆನ್ ಝಾಂಗ್ ಅವರನ್ನು ಎದುರಿಸಲಿದ್ದಾರೆ.