ಅಸ್ತಾನ: ಶಾಂಘೈ ಕೋ-ಅಪರೇಶನ್(SCO)ನ ಸದಸ್ಯತ್ವವನ್ನು ಭಾರತ ಪಡೆದುಕೊಂಡಿದೆ ಎಂದು ಕಜಕೀಸ್ತಾನದ ಅಧ್ಯಕ್ಷ ನೂರುಸುಲ್ತಾನ್ ನಝರ್ಬಾಯಿವ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಈ ಬಗ್ಗೆ ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್ನ ಸೆಕ್ರಟರಿ ಜನರಲ್ ರಶೀದ್ ಅಲಿಮೋ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಭಾರತದೊಂದಿಗೆ ಪಾಕಿಸ್ಥಾನಕ್ಕೂ ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್ನ ಸದಸ್ಯತ್ವ ನೀಡಲಾಗಿದೆ. SCO ಸಮಿತ್ನಲ್ಲಿ ಭಾರತದ ಸದಸ್ಯತ್ವಕ್ಕೆ ರಷ್ಯಾ ಬೆಂಬಲ ನೀಡಿದರೆ, ಪಾಕಿಸ್ಥಾನಕ್ಕೆ ಚೀನಾದ ಬೆಂಬಲ ದೊರಕಿತು.
‘ಇಂದಿನಿಂದ ಭಾರತ ಮತ್ತು ಪಾಕಿಸ್ಥಾನ SCO ಸದಸ್ಯರಾಗಿದ್ದಾರೆ, ಇದು ನಮಗೆ ಮಹತ್ವದ ಘಳಿಗೆಯಾಗಿದೆ’ ಎಂದು ಕಜಕೀಸ್ತಾನದ ಅಧ್ಯಕ್ಷ ನೂರುಸುಲ್ತಾನ್ ನಝರ್ಬಾಯಿವ್ ಹೇಳಿದ್ದಾರೆ.
SCO ಗುಂಪಿನಲ್ಲಿ ಹೆಚ್ಚಿನ ದೇಶಗಳು ತೈಲ ಮತ್ತು ನೈಸರ್ಗಿಕ ಅನಿಲದ ನಿಕ್ಷೇಪಗಳನ್ನು ಹೊಂದಿವೆ ಇದರಿಂದ ಭಾರತಕ್ಕೆ ಇನ್ನು ಮುಂದೆ ಸರಾಗವಾಗಿ ಅನಿಲ ಹಾಗೂ ತೈಲಗಳು ದೊರೆಯಲಿವೆ. ಭಾರತ ಅತೀ ಹೆಚ್ಚು ಶಕ್ತಿ/ಇಂಧನ ಬಳಸುವ ದೇಶವಾಗಿದೆ.
ಪ್ರಸ್ತುತ ಆಸ್ತಾನದಲ್ಲಿ SCOದ ಸಮಿತ್ ನಡೆಯುತ್ತಿದ್ದು, ಭಾರತ, ಕಜಕೀಸ್ತಾನ, ಪಾಕಿಸ್ಥಾನ, ಚೀನಾ ಅಧ್ಯಕ್ಷರುಗಳು ಇದರಲ್ಲಿ ಭಾಗಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.