ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೊನೆಗೂ ತನ್ನ 2017ರ ಗಗನಯಾತ್ರಿಗಳ ತಂಡವನ್ನು ಪ್ರಕಟಗೊಳಿಸಿದೆ. 12 ಜನರನ್ನು ಒಳಗೊಂಡ ಈ ತಂಡದಲ್ಲಿ 7 ಪುರುಷರು ಹಾಗೂ 5 ಮಂದಿ ಮಹಿಳೆಯರಿದ್ದಾರೆ. ಭಾರತೀಯ ಮೂಲದ ಒರ್ವ ವ್ಯಕ್ತಿಯೂ ಇದ್ದಾರೆ.
ಅಮೆರಿಕಾದ ವಾಯುಸೇನೆಯ ಲೆಫ್ಟಿನೆಂಟ್ ಕೊಲೊನಿಯಲ್ ರಾಜ ಚರಿ ಅವರು ಈ ಬಾರಿಯ ಗಗನಯಾತ್ರಿಗಳ ತಂಡದಲ್ಲಿದ್ದಾರೆ. ಈ ಮೂಲಕ ಕಲ್ಪನಾ ಚಾವ್ಲಾ ಮತ್ತು ಸುನೀತ ವಿಲಿಯಮ್ಸ್ ಬಳಿಕ ಅಮೆರಿಕಾದಿಂದ ಬಾಹ್ಯಾಕಾಶಕ್ಕೆ ಹಾರುತ್ತಿರುವ ಮೂರನೇ ಭಾರತೀಯ ಮೂಲದ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.
ರಾಜ ಚರಿ ಅವರ ತಂದೆ ಶ್ರೀನಿವಾಸ್ ಹೈದರಾಬಾದ್ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಳಿಕ ಅಮೆರಿಕಾಗೆ ವಲಸೆ ಹೋಗಿದ್ದರು. ಇವರ ತಾಯಿ ಪೆಗ್ಗಿ ಚರಿ ಅಮೆರಿಕಾದ ಲೊವ ನಿವಾಸಿ.
ರಾಜ ಅವರು ಅಸ್ಟ್ರೋನಾಟಿಕಲ್ ಎಂಜಿನಿಯರ್ ಮತ್ತು ಎಂಜಿನಿಯರಿಂಗ್ ಸೈನ್ಸ್ ಮಾಡಿದ್ದಾರೆ, ಬಳಿಕ ಏರೋನಾಟಿಕ್ಸ್ ಮತ್ತು ಅಸ್ಟ್ರೋನಾಟಿಕ್ಸ್ಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.