ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸರು ಉದಯ್ ಫೌಂಡೇಶನ್ನ ಸಹಕಾರದೊಂದಿಗೆ ರಂಜಾನ್ ಮಾಸದಲ್ಲಿ ಅಗತ್ಯವಿರುವ ಜನರಿಗೆ ಆಹಾರ, ಬಟ್ಟೆಬರೆಗಳನ್ನು ಒದಗಿಸುವ ಅಭಿಯಾನವನ್ನು ಅರಂಭಿಸಿದ್ದಾರೆ.
ಕುಷ್ಠರೋಗ ಪೀಡಿತರಿಗೆ ಈ ಅಭಿಯಾನದಡಿ ಸೋಮವಾರ ಆಹಾರ, ಬಟ್ಟೆಬರೆಗಳನ್ನು ಒದಗಿಸಲಾಯಿತು. ಅಲ್ಲದೇ ವಿವಿಧ ಅಶ್ರಮಗಳಲ್ಲಿದ್ದ 1 ಸಾವಿರ ಅನಾಥರಿಗೂ ಆಹಾರ, ಬಟ್ಟೆಗಳನ್ನು ವಿತರಣೆ ಮಾಡಲಾಗಿದೆ.
ಕಣಿವೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವೇದ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಮುನೀರ್ ಅಹ್ಮದ್ ಖಾನ್ ಅವರ ನಿರ್ದೇಶನದ ಮೇರೆಗೆ ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.