ನೋಟು ನಿಷೇಧದ ಬಳಿಕ 100 ಸಾವಿರ ಮತ್ತು ಹಳೆ 500 ರೂಪಾಯಿ ಮುಖಬೆಲೆಯ ನೋಟಿಗೆ ಯಾವುದೇ ಮೌಲ್ಯ ಇಲ್ಲದಂತಾಗಿದೆ. ಆದರೆ ಹಲವಾರು ಸೃಜನಶೀಲ ವ್ಯಕ್ತಿಗಳು ಈ ನೋಟುಗಳಿಂದ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಅಂತಹವರಲ್ಲಿ 17 ವರ್ಷದ ಲಚ್ಮನ್ ದುಂಡಿ ಕೂಡ ಒಬ್ಬರು.
ಒರಿಸ್ಸಾದ ನೌಪಡ ಜಿಲ್ಲೆಯ ಖರಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುವ ದುಂಡಿ ಅವರು, ಹಳೆ ನೋಟುಗಳಿಂದ ವಿದ್ಯುತ್ ಉತ್ಪಾದಿಸುವ ಆವಿಷ್ಕಾರ ಮಾಡಿದ್ದಾರೆ. 500 ಮುಖಬೆಲೆಯ ಒಂದು ನೋಟಿನಿಂದ 5 ವಾಲ್ಟ್ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಇವರು ಹೇಳುತ್ತಾರೆ.
ನೋಟಿನ ಮೇಲಿನ ಸಿಲಿಕಾನ್ ಕೋಟಿಂಗ್ ಬಳಸಿ ಇವರು ಎನರ್ಜಿ ಸೃಷ್ಟಿಸಿದ್ದಾರೆ. ನೋಟನ್ನು ಹರಿದಾಗ ಈ ಸಿಲಿಕಾನ್ ಕೋಟ್ ಹೊರಕ್ಕೆ ಬರುತ್ತದೆ, ಇದನ್ನು ಸೂರ್ಯನ ಬೆಳಕಿಗೆ ಹಿಡಿದು ಬಳಿಕ ಸಿಲಿಕಾನ್ ಪ್ಲೇಟ್ನ್ನು ಟ್ರಾನ್ಸ್ಫಾರ್ಮರ್ಗೆ ಎಲೆಕ್ಟ್ರಿಕ್ ವೈಯರ್ ಮೂಲಕ ಕನೆಕ್ಟ್ ಮಾಡಿದಾಗ ಅದು ವಿದ್ಯುತ್ ಉತ್ಪಾದಿಸುತ್ತದೆ.
ಇವರ ಆವಿಷ್ಕಾರ ಇದೀಗ ರಾಷ್ಟ್ರೀಯ ಗಮನವನ್ನು ಸೆಳೆದಿದೆ. ಪ್ರಧಾನಿ ಸಚಿವಾಲಯ ಈ ಬಗ್ಗೆ ವರದಿ ಸಂಗ್ರಹಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.