ವಿವಿಧ ಶಾಲೆಗಳಲ್ಲಿ ಓದುತ್ತಿರುವ 12 ವರ್ಷದ ಹುಡುಗರು ಒಂದಾಗಿ ಸ್ವಚ್ಛತೆಯನ್ನು ವಿಭಿನ್ನ ರೀತಿಯಲ್ಲಿ ಪ್ರಚಾರಪಡಿಸುತ್ತಿದ್ದಾರೆ. ಇದಕ್ಕಾಗಿ ‘ಥಿಂಕ್ ಆಂಡ್ ಥ್ರೋ’ (ಯೋಚಿಸಿ ಬಿಸಾಡಿ) ಎಂಬ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಮೂಲಕ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಒಣ ಕಸಗಳನ್ನು ಮರು ಬಳಕೆಗಾಗಿ ಸಂಗ್ರಹಿಸುತ್ತಿದ್ದಾರೆ.
ಈ ಮಕ್ಕಳು ಅಹ್ಮದಾಬಾದ್ನ ರೊಬೊಟ್ರೋನಿಕ್ಸ್ ಕ್ಲಬ್ನ ಸದಸ್ಯರಾಗಿದ್ದರು ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ತಂಡದಲ್ಲಿ ಒಟ್ಟು 10 ಮಕ್ಕಳಿದ್ದು ಎಲ್ಲರೂ 12 ವರ್ಷದವರು. ತಮ್ಮ ನಗರದಲ್ಲಿ ಒಣ ಕಸ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ಇವರ ಮುಖ್ಯ ಗುರಿ.
2015ರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತದ ಅಧ್ಯಯನಕ್ಕೆ ಮಕ್ಕಳನ್ನು ಪ್ರೇರೇಪಿಸುವ ಸಲುವಾಗಿ ರೊಬೊಟ್ರಾನಿಕ್ಸ್ ಸಂಸ್ಥೆ ಸ್ಥಾಪನೆಯಾಯಿತು. ತನ್ನ ಯುವ ಸದಸ್ಯರಿಗಾಗಿ ಅದು ವಾರಗಳಿಗೊಮ್ಮೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಈ ಬಾರಿ ತನ್ನ 10 ಸದಸ್ಯರನ್ನು ಅದು ಯುಎಸ್ ಮೂಲದ ಸ್ಪರ್ಧೆ ‘ಥ್ರ್ಯಾಶ್ ಟ್ರೆಕ್’ಗೆ ಕಳುಹಿಸಲು ಚಿಂತನೆ ನಡೆಸಿದೆ. ಇದು ಮರು ಬಳಕೆ ಮೇಲಿ ಥೀಮ್ನ್ನು ಇದು ಒಳಗೊಂಡಿದೆ.
ಇದೀಗ 10 ಹುಡುಗರ ತಂಡವನ್ನು ಮಾಡಿ ಅವರಿಗೆ ಸ್ಥಳಿಯ ಪ್ರದೇಶದಲ್ಲಿ ಮರುಬಳಕೆಯ ಜಾಗೃತಿ ಮೂಡಿಸಲು ಅದು ಉತ್ತೇಜಿಸಿದೆ. ’ಥಿಂಕ್ ಆಂಡ್ ಥ್ರೋ’ ಎಂಬ ಅಭಿಯಾನವನ್ನು ಅವರ ಮೂಲಕ ಆರಂಭಿಸಿದೆ. ಬೀದಿ ಬೀದಿಗಳಿಗೆ ತೆರಳಿ ಈ ಮಕ್ಕಳು ಕಸ ನಿರ್ವಹಣೆಯ ಅರಿವು ಮೂಡಿಸುತ್ತಿದ್ದಾರೆ. ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಇವರಿಗೆ ವಿವಿಧ ಶಾಲೆಗಳ 800 ವಿದ್ಯಾರ್ಥಿಗಳು ಬೆಂಬಲ ನೀಡುತ್ತಿದ್ದಾರೆ.
ಅಭಿಯಾನ ಆರಂಭಿಸಿದ 20 ದಿನಗಳಲ್ಲಿ ಟನ್ ಕಸ ಸಂಗ್ರಹಿಸಿ ಅದನು ಮರು ಬಳಕೆಗೆ ಯೋಗ್ಯಗೊಳಿಸಿರುವುದು ಈ ಮಕ್ಕಳ ಸಾಧನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.