ರಾಜಸ್ಥಾನದ ಸಿಕತ್ ಜಿಲ್ಲೆಯ ಗಣ್ಪತ್ ಕೃಷ್ಣಾ ಯಾದವ್ ವೃತ್ತಿಯಲ್ಲಿ ಎಂಜಿನಿಯರ್. ಮನಸ್ಸು ಮಾಡಿದ್ದರೆ ಈಗ ದೊಡ್ಡ ಉದ್ಯೋಗದಲ್ಲಿದ್ದು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಭಿನ್ನ ಹಾದಿಯನ್ನು ಆಯ್ಕೆಮಾಡಿಕೊಂಡ ಅವರು ಇಂದು ಒಬ್ಬ ಸಾಧಕನಾಗಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ.
ಬಿರುಬೇಸಿಗೆಯಲ್ಲಿ, ಒಂದು ಹನಿ ನೀರಿಲ್ಲದೆ, ಬೆಳೆಯನ್ನು ಬೆಲೆಯಲು ಸಾಧ್ಯವಾಗದೆ ಭಿಕ್ಷಾಟನೆಯಲ್ಲಿ ತೊಡಗುತ್ತಿದ್ದ ರೈತರನ್ನು ಕಂಡು ತೀವ್ರ ನೊಂದಿದ್ದ ಇವರು, ಇಂತಹವರಿಗೆ ಉದ್ಯೋಗವನ್ನು ದೊರಕಿಸಿಕೊಡಬೇಕು ಎಂಬ ಕಾರಣಕ್ಕಾಗಿಯೇ ಜೈಪುರದಲ್ಲಿ ಸಾವಯಕ ಕೃಷಿಯನ್ನು ಆರಂಭಿಸಿದರು.
ಹಣಕಾಸಿನ ಕೊರತೆಯಿಂದಾಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಲೇ ಇವರು, ತ್ರಿವೇಣಿ ಕೃಷ್ಣ ಆರ್ಗ್ಯಾನಿಕ್ ಪ್ರೈವೇಟ್ ಲಿಮಿಟೆಡ್ನ್ನು ಆರಂಭಿಸಿದರು. ಇಲ್ಲಿ ಹಲವಾರು ರೈತರಿಗೆ ಉದ್ಯೋಗ ನೀಡಿದರು. ಭಿಕ್ಷಕರನ್ನೂ ಕರೆದು ಕೆಲಸ ನೀಡಿದರು. ಈ ಆರ್ಗ್ಯಾನಿಕ್ ಫಾರ್ಮ್ನಲ್ಲಿ ಕ್ಯಾರೆಟ್, ಸಿರಿಧಾನ್ಯ, ಮಸೂರ, ಶೇಂಗಾ ಮುಂತಾದುವುಗಳನ್ನು ಬೆಳೆಸಲಾಗುತ್ತದೆ.
ರೈಲ್ವೇ ಸ್ಟೇಶನ್, ದೇಗುಲ, ಬಸ್ ಸ್ಟ್ಯಾಂಡ್ಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವವರಿಗೆ ಕೌನ್ಸಿಲಿಂಗ್ ನೀಡಿ, ಫಾರ್ಮಿಂಗ್ನಲ್ಲಿ ಕೆಲಸ ಮಾಡುವಂತೆ ಉತ್ತೇಜಿಸುತ್ತಾರೆ. ಈ ಮೂಲಕ ಅವರಿಗೂ ಜೀವನೋಪಾಯಕ್ಕೆ ದಾರಿ ಒದಗಿಸುತ್ತಾರೆ.
ಅಷ್ಟೇ ಅಲ್ಲದೇ ಗ್ರಾಮೀಣ ಮಹಿಳೆಯರ ಸುರಕ್ಷತೆಗಾಗಿ ಗ್ಯಾಜೆಟ್ನ್ನು ಅಭಿವೃದ್ಧಿಪಡಿಸಿದರು. 2015ರಲ್ಲಿ ’ರಾಜ್ ತಿಲಕ್’ ಎಂಬ ಪುಸ್ತಕ ಬಿಡುಗಡೆಗೊಳಿಸಿದ ಇವರು, ಅದರಲ್ಲಿ ತನ್ನ ಗ್ಯಾಜೆಟ್ಗಳ ಸಂಪೂರ್ಣ ಮಾಹಿತಿಗಳನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.