ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯವನ್ನು ರೂಪಿಸುವ ಉದಾತ್ತ ವೃತ್ತಿ ಶಿಕ್ಷಕ ವೃತ್ತಿ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದರು. ಹೌದು ಅವರು ಹೇಳಿದ ಮಾತು ಅಕ್ಷರಶಃ ಸತ್ಯ. ಶಿಕ್ಷನಾದವನು ಮಕ್ಕಳ ಭವಿಷ್ಯವನ್ನು ಮಾತ್ರವಲ್ಲ, ಅವರ ವ್ಯಕ್ತಿತ್ವವನ್ನೂ ರೂಪಿಸುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ತಮಿಳುನಾಡಿನ ಶಿಕ್ಷಕಿ ಅನ್ನಪೂರ್ಣ.
ಅನ್ನಪೂರ್ಣ ಮೋಹನ್ ಅವರು ಸರ್ಕಾರಿ ಶಾಲಾ ಶಿಕ್ಷಕಿ. ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಗಿಟ್ಟಿಸುವ ಅವಕಾಶವಿತ್ತಾದರೂ ಶಿಕ್ಷಕಿ ವೃತ್ತಿಯನ್ನು ಆರಿಸಿಕೊಂಡವರು. ತನ್ನಲ್ಲಿನ ಆಭರಣಗಳನ್ನು ಮಾರಾಟ ಮಾಡಿ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸಿಕೊಟ್ಟವರು.
ಇಂಗ್ಲೀಷ್ ಶಿಕ್ಷಕಿಯಾದ ಇವರು ವಿದ್ಯಾರ್ಥಿಗಳ ಇಂಗ್ಲೀಷ್ ಕಮ್ಯೂನಿಕೇಶನ್ ವೃದ್ಧಿಗೆ ಇನ್ನಿಲ್ಲದಂತೆ ಪರಿಶ್ರಮಪಡುತ್ತಿದ್ದಾರೆ. ಅದಕ್ಕಾಗಿ ಇಂಗ್ಲೀಷ್ ತರಬೇತಿ ಕ್ಲಾಸ್ ಆರಂಭಿಸಿದ್ದಾರೆ. ಉತ್ತಮ ಶಿಕ್ಷಣಕ್ಕಾಗಿ ಡಿಜಿಟಲ್ ಕ್ಲಾಸ್ ರೂಮ್ಗಳನ್ನು ಆರಂಭಿಸಿದ್ದಾರೆ. ತಮ್ಮ ವಿದ್ಯಾರ್ಥಿಗಳ ಎಲ್ಲಾ ಚಟುವಟಿಕೆಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವ ಇವರಿಗೆ ಉತ್ತಮ ಸ್ಪಂದನೆಗಳು ಸಿಕ್ಕಿವೆ. ಕೆಲವರು ಬ್ಯಾಡ್ಮಿಂಟನ್ ರಾಕೆಟ್ ಸೇರಿದಂತೆ ಇತರ ಕ್ರೀಡಾ ಪರಿಕರಗಳನ್ನು, ವಿದ್ಯಾಭ್ಯಾಸ ಪರಿಕರಗಳನ್ನು, ಅನುದಾನಗಳನ್ನು ವಿದ್ಯಾರ್ಥಿಗಳಿಗಾಗಿ ಕಳುಹಿಸಿಕೊಡುತ್ತಿದ್ದಾರೆ.
ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಮತ್ತು ತಮ್ಮ ಶಾಲೆಯಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವುದಕ್ಕಾಗಿ ಹಣಕಾಸಿನ ಕೊರತೆ ಕಂಡು ಬಂದಾಗ ಇವರು ತಮ್ಮಲ್ಲಿನ ಆಭರಣವನ್ನು ಮಾರಿ ಬೇಕಾದ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.
ಇದೀಗ ಇವರ ಸರ್ಕಾರಿ ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳದು ನಿಂತಿದೆ. ಇಂಗ್ಲೀಷ್ ಕಮ್ಯೂನಿಕೇಶನ್ಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಡಿಜಿಟಲ್ ಕ್ಲಾಸ್ ರೂಮ್ ಇದೆ, ಎಲ್ಲಾ ಸೌಕರ್ಯಗಳೂ ಇದೆ. ಇದಕ್ಕೆಲ್ಲಾ ಅನ್ನಪೂರ್ಣ ಅವರ ತ್ಯಾಗ ಮತ್ತು ಪರಿಶ್ರಮವೇ ಕಾರಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.