ಫೆಮಿನಾ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಆಕರ್ಷಣೆಯಾಗಿ ನಟಿ ಪ್ರಣಿತಾ ಸುಭಾಷ್ ಉಪಸ್ಥಿತಿಯಲ್ಲಿ ಫ್ಯಾಷನ್ ಶೋ ಮೂಲಕ ಹೊಸ ಉತ್ಪನ್ನದ ಅನಾವರಣ
ಬೆಂಗಳೂರು : ಅತ್ಯಂತ ಜನಪ್ರಿಯ ಹಾಗೂ ಬೃಹತ್ ಆನ್ಲೈನ್ ಎಥ್ನಿಕ್ ಮಳಿಗೆಯಾಗಿರುವ ಕ್ರಾಫ್ಟ್ವಿಲ್ಲಾ ಹಾಗೂ ಅತಿದೊಡ್ಡ ಮಹಿಳೆಯರ ಉತ್ಪನ್ನಗಳ ತಾಣವಾದ ಫೆಮಿನಾ ಜಂಟಿಯಾಗಿ ನಗರದಲ್ಲಿ ಕ್ರಾಫ್ಟ್ವಿಲ್ಲಾದ ಆಂತರಿಕ ಉತ್ಪನ್ನವಾದ ಅನುಸ್ವರವನ್ನು ಅನಾವರಣಗೊಳಿಸಿವೆ. ಇದು ಮಹಿಳೆಯರ ಸರ್ವಕಾಲೀನ ಸಾಂಪ್ರದಾಯಿಕ ಉಡುಗೆಯಾಗಿ ಲಭಿಸಿದ್ದು, ಕಲಾಂಕರಿ, ಇಕಾಟ್, ಬ್ಲಾಕ್ ಪ್ರಿಂಟ್ ಹಾಗೂ ಇಂಡಿಗೊಗಳಿಂದ ಪ್ರಭಾವಿತವಾಗಿ ಈ ಸಂಗ್ರಹ ರೂಪುಗೊಂಡಿದೆ. ಅನುಸ್ವರವು ಬೆಂಗಳೂರಿನ ಸೆಂಟ್ಮಾರ್ಕ್ಸ್ ರಸ್ತೆಯಲ್ಲಿರುವ ಮಿಸು ಮಳಿಗೆಯಲ್ಲಿ ನಡೆಯಿತು. ಆಗಮಿಸಿದ್ದ ಗಣ್ಯರ ಸಮ್ಮುಖದಲ್ಲಿ ಸಂಗ್ರಹದ ಮೊದಲ ನೋಟವನ್ನು ಅಭಿವ್ಯಕ್ತಪಡಿಸುವ ಆಕರ್ಷಕ ಫ್ಯಾಷನ್ ಶೋ ಕೂಡ ನಡೆಯಿತು. ಈ ಆಕರ್ಷಕ ಶೋನಲ್ಲಿ ನಟಿ ಪ್ರಣಿತಾ ಸುಭಾಷ್ ವಿಶೇಷ ಆಕರ್ಷಣೆಯಾಗಿ ಕಂಡರು.
ಅನುಸ್ವರ ದೇಶದ ಬಹುಸಂಖ್ಯೆಯ ಕರಕುಶಲ ಕಳೆಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಇದರಿಂದಾಗಿ ಸಾಂಪ್ರದಾಯಿಕ ನೋಟ ಹಾಗೂ ಅನುಭವವನ್ನು ಒದಗಿಸುತ್ತದೆ. ಗ್ರಾಹಕರು ನಿತ್ಯ ಬಳಕೆ ಅಥವಾ ವಿಶೇಷ ಸಂದರ್ಭದಲ್ಲಿ ಬಳಸಬಹುದಾದ ಆಯ್ಕೆಗಳನ್ನು ಇಲ್ಲಿ ಪಡೆಯಬಹುದು. ಇದರಲ್ಲಿ ನಾಲ್ಕು ಆಯ್ಕೆಯ ಸಂಗ್ರಹಗಳಿದ್ದು, ಇಕಾಟ್ ಇಲ್ಸ್ಟ್ರೇಷನ್, ಕಲಂಕರಿ ಟೇಲ್ಸ್, ಸಮ್ಮರ್ ಹ್ಯೂಸ್ ಹಾಗೂ ಇಂಡಿಗೊ ಇಂಪ್ರೆಷನ್ಸ್. ಈ ನಾಲ್ಕನೇ ಸಂಗ್ರಹವಾದ ಇಂಡಿಗೊ ಇಂಪ್ರೆಷನ್ಸ್ ಮಾತ್ರ 2017 ರ ಮೇ ತಿಂಗಳಿಂದ ಅಂದರೆ ಮುಂದಿನ ತಿಂಗಳಿಂದ ಲಭಿಸಲಿದೆ.
ಈ ಉತ್ಪನ್ನವು ಇಂದು ಮಹಿಳೆಯರಿಗೆ ವಿಶೇಷ ಅವಕಾಶವನ್ನು ಒದಗಿಸಿದ್ದು, ವಿಶಿಷ್ಟ ನೋಟವನ್ನು ಹೊಂದಲು ಹಾಗೂ ಗುಂಪಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವಂತೆ ಮಾಡಲು ಸಹಕಾರಿಯಾಗಿದೆ. ಇದು ಕಚೇರಿಯಂತ ಪ್ರದೇಶ ಇರಬಹುದು ಅಥವಾ ನೂರಾರು ಮಂದಿ ಸೇರಿರುವ ಕಾರ್ಯಕ್ರಮಗಳಲ್ಲಿ ಇರಬಹುದು, ಸ್ಟನ್ನಿಂಗ್ ಫ್ಯಾಷನ್ ಲುಕ್ನ್ನು ಒದಗಿಸುತ್ತದೆ. ಮಹಿಳೆಯರು ಇಂದು ಕೇವಲ ವಿವಾಹ, ಉತ್ಸವಗಳ ಸಂದರ್ಭದಲ್ಲಿ ಮಾತ್ರ ಈ ಮಾದರಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವುದಿಲ್ಲ. ನಿತ್ಯದ ಬಳಕೆಗೂ ಉಪಯೋಗಿಸುತ್ತಿದ್ದಾರೆ. ಆಧುನಿಕ ಭಾರತೀಯ ನಾರಿಯರ ಇಂದಿನ ಅಗತ್ಯವನ್ನು ಅನುಸ್ವರ ಯಶಸ್ವಿಯಾಗಿ ತುಂಬಿಕೊಡಲಿದೆ. ಇದರ ಜತೆ ಹೆಚ್ಚುವರಿಯಾಗಿ ಕರಕುಶಲ ಪ್ರೇರಿತ ಪಾರಂಪರಿಕ ಫ್ಯಾಷನ್ ಆಗಿ ಲಭಿಸುತ್ತಿದೆ.
ಅನುಸ್ವರ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಕ್ರಾಫ್ಟ್ವಿಲ್ಲಾದ ಮುಖ್ಯ ವ್ಯಾಪಾರ ಅಧಿಕಾರಿ ಮನಿಷ್ ಕಲ್ರಾ, ಅನುಸ್ವರವು ಕ್ರಾಫ್ಟ್ವಿಲ್ಲಾದ ಮೂರನೇ ಆಂತರಿಕ ಉತ್ಪನ್ನವಾಗಿದೆ. ಈಗಾಗಲೇ ಅವನ್ಯ ಹಾಗೂ ಜರೋಂಖಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಅನುಸ್ವರದ ಮೂಲಕ ನಮ್ಮ ಗುರಿ ಏನೆಂದರೆ, ಉತ್ತಮ ಗುಣಮಟ್ಟ ಹಾಗೂ ಕೈಗೆಟುಕುವ ಬೆಲೆಯಲ್ಲಿ ಅತ್ಯಂತ ವಿಶಿಷ್ಟ ವಿನ್ಯಾಸದ ಉಡುಪನ್ನು ನಮ್ಮ ಗ್ರಾಹಕರಿಗೆ ತಲುಪಿಸುವುದಾಗಿದೆ. ಈ ಉಡುಪು ವೃತ್ತಿ ನಿರತ ಮಹಿಳೆಯರಿಗೆ ಅದರಲ್ಲೂ ಸೌಮ್ಯಸ್ವಭಾವದವರಿಗೆ ಹೇಳಿ ಮಾಡಿಸಿದಂತಿದೆ. ಅಲ್ಲದೇ ಕಲೆ ಹಾಗೂ ಕರಕುಶಲತೆಯನ್ನು ಪ್ರೀತಿಸುವವರಿಗೆ ಸೂಕ್ತ ಎನ್ನಬಹುದಾಗಿದೆ. ಈ ಹೊಸ ಸರಣಿಯು ಹೆಚ್ಚಿನ ಆದಾಯವನ್ನು ತಂದುಕೊಡಲಿವೆ ಅಲ್ಲದೇ ದೀರ್ಘಾವಧಿ ನಮ್ಮ ಉತ್ಪನ್ನಕ್ಕೆ ಮೌಲ್ಯ ತಂದುಕೊಡಲಿವೆ ಎಂದರು.
ನಟಿ ಪ್ರಣಿತಾ ಸುಭಾಷ್ ರ್ಯಾಂಪ್ ಮೇಲೆ ವಾಕ್ ಮಾಡಿ ಅನುಸ್ವರದ ಆಕರ್ಷಕ ಸಂಗ್ರಹಗಳ ವಿಧವನ್ನು ಪರಿಚಯಿಸಿದರು. ಹೊಸ ಉತ್ಪನ್ನವನ್ನು ಅನಾವರಣಗೊಳಿಸಿ ಮಾತನಾಡಿ, ಫ್ಯಾಷನ್ ಶೈಲಿಗಳು ಇಂದು ಸಾಕಷ್ಟು ಆರಾಮದಾಯಕವಾಗುತ್ತಿವೆ. ವಿಶಿಷ್ಠ ಶೈಲಿಗಳಿಂದ ಇದು ಸಾಧ್ಯವಾಗಿದೆ. ನನಗೆ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಉಡುಪುಗಳನ್ನು ಧರಿಸುವುದು ಅಂದರೆ ತುಂಬಾ ಇಷ್ಟ. ಇವುಗಳಲ್ಲಿ ಸಮಕಾಲೀನತೆಯ ಸ್ವಿಸ್ಟ್ ಇರುತ್ತದೆ. ಇಂದು ಅನಾವರಣಗೊಂಡ ಉಡುಪುಗಳು ಆಕರ್ಷಕ ಶೈಲಿಯಲ್ಲಿದ್ದು, ಕ್ಲಾಸಿ ಹಾಗೂ ಆಧುನಿಕ ರೂಪ ಹೊಂದಿವೆ ಎಂದರು.
ಫೆಮಿನಾ ಸಂಪಾದಕಿ ಹಾಗೂ ಮುಖ್ಯ ಸಮುದಾಯ ಅಧಿಕಾರಿ ತಾನ್ಯಾ ಚೈತನ್ಯ ಇದೇ ಸಂದರ್ಭ ಮಾತನಾಡಿ, ಫೆಮಿನಾವು ಮುಕ್ತ ಮನಸ್ಸಿನ ಯುವ ಭಾರತೀಯ ಮಹಿಳೆಯರನ್ನು ಅತ್ಯಂತ ಆಕರ್ಷಿಸಿದೆ. ಸಾರಸಂಗ್ರಹಿತ ಸದಭಿರುಚಿ ಉಳ್ಳ ವಿಶಿಷ್ಟ ಶೈಲಿಯನ್ನು ಇಷ್ಟಪಡುವ ವರ್ಗವನ್ನು ಹೊಂದಿದೆ. ಪಾಶ್ಚಿಮಾತ್ಯ ಸಮೂಹದ ಪ್ರಭಾವದಿಂದಾಗಿ ಬಳಸುವ ಉಡುಗೆಗಳಿಗೆ ಹೇಗೆ ಮಹಿಳೆ ಫಿಟ್ ಆಗುತ್ತಾಳೋ ಹಾಗೆಯೇ ಈ ಪಾರಂಪರಿಕ ಉಡುಗೆಗೂ ಫಿಟ್ ಆಗುತ್ತಾಳೆ. ಕ್ರಾಫ್ಟ್ವಿಲ್ಲಾ ಜತೆ ನಮ್ಮ ಸಹಯೋಗ ಮಹಿಳೆಯರಿಗೆ ತಮ್ಮ ವಾರ್ಡ್ರೋಬ್ನ್ನು ಇನ್ನಷ್ಟು ಧರಿಸಲು ಯೋಗ್ಯ ಹಾಗೂ ಟ್ರೆಂಡಿಯಾಗಿ ಮಾರ್ಪಡಿಸಲಿದೆ. ಅದೂ ಸಾಂಪ್ರದಾಯಿಕ ಶೈಲಿಯಲ್ಲಿ ಅನ್ನುವುದು ಪ್ರಮುಖ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.