ಭಾರತ ಹಲವು ಹಳ್ಳಿಗಳಂತೆ ಕೊಪ್ಪಳದ ದನಪುರ್ ಕೂಡ ಬಯಲು ಶೌಚವನ್ನು ಹೆಚ್ಚಾಗಿ ನೆಚ್ಚಿಕೊಂಡ ಹಳ್ಳಿ. ಇಲ್ಲಿನ ಜನ ಶೌಚಕ್ಕಾಗಿ ಜನ ಹಲವು ಮೈಲಿಗಳಷ್ಟು ನಡೆದುಕೊಂಡು ಹೋಗುತ್ತಾರೆ. ಆದರೀಗ ಅಲ್ಲಿ ನಿಧಾನವಾಗಿ ಬದಲಾವಣೆ ಬರುತ್ತಿದೆ. ಶೌಚಾಲಯಗಳ ಅರಿವು ಅಲ್ಲಿನ ಜನಕ್ಕೆ ಮೂಡುತ್ತಿದೆ. ಇದಕ್ಕೆ ಕಾರಣ ಸ್ವಚ್ಛ ಹೋರಾಟಗಾರ್ತಿ ಶರಣಮ್ಮ ಬಕರ್.
ಶರಣಮ್ಮ ಒರ್ವ ತರಕಾರಿ ಮಾರಟಗಾರ್ತಿ. ಆದರೆ ಕೇವಲ ತರಕಾರಿ ಮಾರಾಟ ಮಾಡುವ ಕಾಯಕವನ್ನು ಮಾತ್ರವೇ ಆಕೆ ಮಾಡುತ್ತಿಲ್ಲ. ಬದಲಿಗೆ ಶೌಚಾಲಯದ ಮಹತ್ವದ ಬಗ್ಗೆ ಪ್ರಚಾರ ಮಾಡುತ್ತಾಳೆ. ಮನೆ ಮನೆಗೆ ಹೋಗಿ ಶೌಚಾಲಯವನ್ನು ಕಟ್ಟಿ ಎಂದು ಹುರಿದುಂಬಿಸುತ್ತಾಳೆ. ವಿಶೇಷವೆಂದರೆ ಆಕೆ ಭೇಟಿಕೊಟ್ಟ ಪ್ರತಿ ಮನೆಯಲ್ಲೂ ಇದೀಗ ಶೌಚಾಲಯ ನಿರ್ಮಾಣವಾಗಿದೆ.
ತಾನು ಭೇಟಿಕೊಟ್ಟ ಮನೆಗಳಲ್ಲಿ ಶೌಚಾಲಯವಿದ್ದರೆ ಅಂತಹ ಮನೆಗಳಿಗೆ 1ಕೆಜಿ ಉಚಿತವಾಗಿ ಟೊಮ್ಯಾಟೋ ನೀಡುತ್ತಾಳೆ. ತನ್ನ ಹೊಟ್ಟೆಪಾಡಿಗೆಯೇ ಕಷ್ಟ ಪಡುವ ಶರಣಮ್ಮ ಸ್ವಚ್ಛತೆಗಾಗಿ ಇಷ್ಟೊಂದು ಪರಿಶ್ರಮ ಪಡುವುದು ನಿಜಕ್ಕೂ ಶ್ಲಾಘನೀಯ. ತರಕಾರಿ ಮಾರುವ ಬಡ ಮಹಿಳೆಯಾಗಿ, ಗಂಡ ತೊರೆದು ಹೋಗಿದ್ದರೂ ತನ್ನ ಮಗಳನ್ನು ಈಕೆ ಎಲ್ಎಲ್ಬಿ ಓದಿಸುತ್ತಿದ್ದಾಳೆ. ಇದಕ್ಕೆಲ್ಲಾ ಕಾರಣ ಆಕೆಯ ಪರಿಶ್ರಮ.
ಎಲ್ಲರಂತೆ ಆಕೆಗೂ ತರಕಾರಿ ಮಾರಿ ಹಣ ಮಾಡಿ ತನ್ನ ಪಾಡಿಗೆ ಇರಬಹುದಿತ್ತು, ಆದರೆ ಆಕೆ ಭಿನ್ನ ಹಾದಿಯನ್ನು ಹಿಡಿದು ಸ್ವಚ್ಛ ರಾಷ್ಟ್ರದ ನಿರ್ಮಾಣಕ್ಕೆ ತನ್ನದೆಯಾದ ಕೊಡುಗೆಗಳನ್ನು ನೀಡುತ್ತಿದ್ದಾಳೆ. ತನ್ನ ಹಳ್ಳಿಯ 1,300 ಮನೆಗಳಿಗೆ ಶೌಚಾಲಯವಿಲ್ಲ ಎಂಬ ವರದಿಯನ್ನು ತಿಳಿದ ಬಳಿಕ ಆಕೆ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾಳೆ. ಆಕೆಯ ಕಾರ್ಯಕ್ಕೆ ಹಾಟ್ಸ್ಆಫ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.