ತನ್ನ ಕೈ, ಕಾಲುಗಳನ್ನು ಕಿತ್ತುಕೊಂಡ ಆ ವಿಧಿಗೆ ಸವಾಲೆಸೆದು ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಒರ್ವ ಕ್ರೀಡಾಪಟು ಆಗಿ ಸಾಧನೆ ಮಾಡುತ್ತಿರುವವರು ಶಾಲಿನಿ ಸರಸ್ವತಿ. ಬ್ಲೇಡ್ ರನ್ನರ್ ಆಗಿರುವ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹತ್ವದ ಸಾಧನೆ ಮಾಡಿದ್ದಾರೆ.
ಕೆಳ ವರ್ಷಗಳ ಹಿಂದೆ ಕಾಂಬೋಡಿಯಾದಿಂದ ಹಿಂದುರಿಗಿದ ಇವರು ವಿಪರೀತ ಜ್ವರಕ್ಕೆ ತುತ್ತಾದರು. ಈ ಜ್ವರ ಕೊನೆಗೆ ಅವರ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ಎರಡು ಅಂಗೈ ಮತ್ತು ಎರಡು ಕಾಲುಗಳನ್ನು ಕಿತ್ತುಕೊಂಡಿತು. ಜೀವನದ ಮೇಲಿನ ನಂಬಿಕಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ಅವರು ತಲುಪಿದ್ದರು.
ಆದರೆ ಸೋಲನ್ನು ಒಪ್ಪಿಕೊಳ್ಳದ ಜಾಯಮಾನದವರಾದ ಶಾಲಿನಿ ಕೊನೆಗೂ ಎಲ್ಲವನ್ನೂ ಮರೆತು ಹೊಸ ಉತ್ಸಾಹದೊಂದಿಗೆ ಮುಂದೆ ಸಾಗಲು ಪಣತೊಟ್ಟರು. ವಿಧಿಯಾಟಕ್ಕೆ ಸಾವಲೊಡ್ಡಿ ಬ್ಲೇಡ್ ರನ್ನರ್ ಆದರು. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಟಿಸಿಎಸ್ 10ಕೆ ರೇಸ್ನಲ್ಲೂ ಅವರು ಭಾಗವಹಿಸಿ ಎಲ್ಲರನ್ನು ಮೋಡಿ ಮಾಡಿದರು.
‘ನಾನೀಗ ಹಿಂದಿರುಗಿ ವಿಧಿಯನ್ನು ನೋಡಬಲ್ಲೆ, ನನ್ನೊಂದಿಗೆ ನೀನು ತಪ್ಪು ಮಾಡಿದೆ ಎಂಬುದನ್ನು ನಾನು ವಿಧಿಗೆ ಈಗ ತೋರಿಸಿಕೊಡಬಲ್ಲೆ, ಅದು ಜಯಿಸಲಿಲ್ಲ, ನಾನು ಬಿಟ್ಟುಕೊಡಲಿಲ್ಲ. ಕೈಕಾಲುಗಳು ಇರಲಿ, ಇಲ್ಲದಿರಲಿ ನನ್ನ ಬದುಕು, ನನ್ನ ಕನಸು’ ಎಂದು ಶಾಲಿನಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂದು ತಲೆ ಮೇಲೆ ಕೈ ಹೊತ್ತಿರುವವರು ಜೀವನದ ಬಗ್ಗೆ ಅತೀವ ಪ್ರೀತಿ ಹೊಂದಿರುವ ಉತ್ಸಾಹದ ಚಿಲುಮೆ ಶಾಲಿನಿ ಸರಸ್ವತಿ ಅವರನ್ನು ನೋಡಿ ಕಲಿಯಬೇಕಾಗಿರುವುದು ಬಹಳಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.