ನವದೆಹಲಿ: ಸಣ್ಣ ಪುಟ್ಟ ನೋವು, ಶೀತ, ಜ್ವರಗಳ ಸಂದರ್ಭದಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ತೆಗೆದುಕೊಳ್ಳುವ Combiflam,ಮತ್ತು D-Cold Total ಔಷಧಿಗಳು ಸೇರಿದಂತೆ ಒಟ್ಟು 60 ಔಷಧಿಗಳು ಕಳಪೆ ಗುಣಮಟ್ಟದ್ದು ಎಂದು ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ(CDSCO ) ಹೇಳಿದೆ.
ಪರೀಕ್ಷೆಗಳ ಬಳಿಕ ಈ ಔಷಧಿಗಳು ಕಳಪೆ ಗುಣಮಟ್ಟದ್ದು ಎಂದಿರುವ ಸಂಸ್ಥೆ, ಅವುಗಳ ಮಾರಾಟ ಮತ್ತು ಹಂಚಿಕೆಯನ್ನು ನಿರ್ಬಂಧ ಹೇರಿದೆ.
Combiflamನ್ನು ಸನೊಫಿ ಇಂಡಿಯಾ ಮತ್ತು D-Cold Totalನ್ನು ರೆಕಿಟ್ಟ್ ಬೆಂಕೈಸರ್ ಹೆಲ್ತ್ಕೇರ್ ಇಂಡಿಯಾ ಉತ್ಪಾದನೆ ಮಾಡುತ್ತಿದೆ.
ಈ ಔಷಧಿಗಳ ಪರೀಕ್ಷೆಯನ್ನು ಸಂಸ್ಥೆ ಕಳೆದ ತಿಂಗಳು ನಡೆಸಿತ್ತು. ಇವು ಮಾತ್ರವಲ್ಲದೇ Cipla’s Oflox-100 DT tablets , Theo Asthalin tablets, Cadila’s Cadilose solution ಔ॒ಷಧಿಗಳೂ ಕಳಪೆ ಗುಣಮಟ್ಟದ್ದು ಎಂದು ಹೇಳಿದೆ.
ಇದರಲ್ಲಿ Oflox-100 DT ರೋಗ ನಿರೋಧಕ ಔಷಧಿಯಾಗಿದ್ದು, Theo Asthalin ನ್ನು ಉಸಿರಾಟದ ಸಮಸ್ಯೆಗೆ ಬಲಸಲಾಗುತ್ತದೆ. Cadilose solutionನ್ನು ಮಲಬದ್ಧತೆಯ ಸಮಸ್ಯೆಗೆ ಬಳಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.