ಹೈದರಾಬಾದ್: ಆಡಳಿತದಲ್ಲಿ ವಿಭಿನ್ನ ವಿಧಾನವನ್ನು ಅನುಸರಿಸುವುದಕ್ಕೆ ಹೆಸರಾಗಿರುವವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಈ ಬಾರಿ ಅವರು ತಮ್ಮ ರಾಜ್ಯದಲ್ಲಿ ಜನರ ಕುಂದುಕೊರತೆಗಳನ್ನು ಆಲಿಸುವ ಕಾಲ್ಸೆಂಟರ್ನ್ನು ತೆರೆದಿದ್ದಾರೆ. ಈ ರೀತಿಯ ಕಾಲ್ಸೆಂಟರ್ ದೇಶದಲ್ಲೇ ಮೊದಲು.
ತಮ್ಮ ರಾಜಧಾನಿ ಅಮರತಾವತಿಯಲ್ಲಿ ನಿರ್ಮಿಸಲಾದ ಈ ಮೆಗಾ ಕಾಲ್ಸೆಂಟರ್ ಪರಿಸ್ಕರ ವೇದಿಕಾವನ್ನು ನಾಯ್ಡು ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.
ಆಧಾರ್ ಸಂಖ್ಯೆ ಹೇಳುವ ಮೂಲಕ ಎಲ್ಲಾ ನಾಗರಿಕರು ಪಾರದರ್ಶಕ ಮತ್ತು ಎಟುಕುವ ಸೇವೆಗಳನ್ನು ಪಡೆಯುವ ಸಲುವಾಗಿ ಕುಂದುಕೊರತೆ ಪರಿಹಾರ ಆಧರಿತ ವೇದಿಕೆಯನ್ನು ರಚಿಸುವ ಯೋಜನೆಯಡಿ ಈ ಕಾಲ್ಸೆಂಟರ್ ತೆರೆಯಲಾಗಿದೆ.
ಸರ್ಕಾರದ ಹಲವಾರು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಫಲಾನುಭವಿಗಳ ವೈಯಕ್ತಿಕ ಪ್ರತಿಕ್ರಿಯೆಯನ್ನು ಪಡೆಯಲು, ಯೋಜನೆಗಳಿಂದ ಹೇಗೆ ಹೆಚ್ಚಿನ ಲಾಭಗಳನ್ನು ಪಡೆಯಬಹುದು ಎಂಬ ಬಗ್ಗೆ ಅವರಿಗೆ ತಿಳಿಸುವ ಉದ್ದೇಶವನ್ನು ಈ ಕಾಲ್ ಸೆಂಟರ್ ಹೊಂದಿದೆ.
ಈ ಕಾಲ್ಸೆಂಟರ್ನಲ್ಲಿ ೭೫೦ ಸೀಟುಗಳಿದ್ದು, ದಿನದ ೧೨ ಗಂಟೆ ಕಾರ್ಯನಿರ್ವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.