ನವದೆಹಲಿ: ಪ್ರಯಾಣ ರಿಯಾಯಿತಿಗಳನ್ನು ಪಡೆಯಲು ಹಿರಿಯ ನಾಗರಿಕರಿಗೆ ನಿಗದಿಪಡಿಸಲಾಗಿದ್ದ ವಯಸ್ಸಿನ ಮಿತಿಯನ್ನು ಏರ್ಇಂಡಿಯಾ ಮತ್ತಷ್ಟು ತಗ್ಗಿಸಿದೆ.
ಇನ್ನು ಮುಂದೆ 60 ವರ್ಷದ ಹಿರಿಯ ನಾಗರಿಕರೂ ಪ್ರಯಾಣ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಇದುವರೆಗೆ 63 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ರಿಯಾಯಿತಿ ಸಿಗುತ್ತಿತ್ತು.
ಎಕನಾಮಿ ಕ್ಲಾಸ್ ಸೀಟಿನ ದರದಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಶೇ.50ರಷ್ಟು ರಿಯಾಯಿತಿ ದೊರೆಯುತ್ತದೆ. ಈ ಸೌಲಭ್ಯ ಪಡೆಯಲು ವೋಟರ್ ಐಡಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಸಿನಿಯರ್ ಸಿಟಿಜನ್ ಕಾರ್ಡ್ ನಂತಹ ಸ್ಪಷ್ಟ ಗುರುತಿನ ಚೀಟಿಯನ್ನು ಸಲ್ಲಿಸಬೇಕಾಗುತ್ತದೆ.
ದೇಶಿ ಪ್ರಯಾಣಕ್ಕೆ ಮಾತ್ರ ಈ ಸೌಲಭ್ಯ ಸಿಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.