ಫೈಝಾಬಾದ್: 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸುವಂತೆ ಪ್ರತಿಭಟನಾಕಾರರಿಗೆ ಆದೇಶಿಸಿದ್ದು ನಾನೇ ಹೊರತು ಎಲ್.ಕೆ.ಅಡ್ವಾಣಿಯಲ್ಲ ಎಂದು ಮಾಜಿ ಬಿಜೆಪಿ ಸಂಸದ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಘಟನೆಯಲ್ಲಿ ಅಡ್ವಾಣಿಯವರ ಯಾವ ಪಾತ್ರವೂ ಇಲ್ಲ. ನಾನೇ ಆ ಕಟ್ಟಡವನ್ನು ಕೆಡವಿದೆ, ಅದು ಧ್ವಂಸವಾಯಿತು ಎಂಬುದನ್ನು ನಾನೇ ಖಚಿತಪಡಿಸಿಕೊಂಡೆ’ ಎಂದಿದ್ದಾರೆ.
ಅಡ್ವಾಣಿ ಸೇರಿದಂತೆ ಇತರರ ವಿರುದ್ಧ ಬಾಬ್ರಿ ಮಸೀದಿ ಧ್ವಂಸಕ್ಕೆ ಪಿತೂರಿ ನಡೆಸಿದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಆರೋಪಿಸಲ್ಪಟ್ಟ 13 ಮಂದಿಯಲ್ಲಿ ವೇದಾಂತಿ ಕೂಡ ಒಬ್ಬರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.