ಉಡುಪಿ : ರತ್ನಪ್ರಭಾ ಅವರ ಅನುಭವ, ವಿದ್ಯಾರ್ಹತೆಯಿಂದ ರಾಜ್ಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಹುದ್ದೆಯನ್ನು ಅಲಂಕರಿಸಬೇಕಾಗಿತ್ತು. ಆ ಹಂತದವರೆಗೆ ದಲಿತ ಮಹಿಳೆಯೊಬ್ಬಳು ತಲುಪಲು ಅನೇಕ ವರ್ಷಗಳೇ ಬೇಕಾಗುತ್ತದೆ. ಎಲ್ಲರಿಗೂ ಅಲ್ಲಿಯವರೆಗೆ ತಲುಪಲು ಸಾಧ್ಯವಿಲ್ಲ. ಪುರುಷರು ಬಹುಬೇಗನೆ ಈ ಹುದ್ದೆಯವರೆಗೆ ತಲುಪಬಹುದು, ಆದರೆ ಒಬ್ಬ ದಲಿತ ಮಹಿಳೆ ಈ ಹಂತಕ್ಕೆ ತಲುಪುವುದು ಕಷ್ಟಸಾಧ್ಯ. ಇಂತಹ ಸಮಯದಲ್ಲಿ ರತ್ನಪ್ರಭಾ ಅವರಿಗೆ ಪ್ರಿನ್ಸಿಪಲ್ ಸೆಕ್ರೆಟರಿ ಹುದ್ದೆಯನ್ನು ನೀಡುವ ಅವಕಾಶವಿದ್ದರೂ ಸರ್ಕಾರ ಈ ಕ್ರಮವನ್ನು ಕೈಗೊಳ್ಳದೆ ಇದ್ದಾಗ ದಲಿತರಲ್ಲಿ ಆಕ್ರೋಶ ಉಂಟಾಗುವ ಸನ್ನಿವೇಶ ಇತ್ತು. ಆ ಸಂದರ್ಭದಲ್ಲಿ ಉಡುಪಿ ಚಲೋ ಎನ್ನುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ದಿಕ್ಕನ್ನೇ ಬದಲಾಯಿಸುವ ಕೆಲಸವನ್ನು ಸರ್ಕಾರಕ್ಕೆ ಮಾಧ್ಯಮ ಸಲಹೆಯನ್ನು ಕೊಡುವಂತಹ ಸ್ಥಾನದಲ್ಲಿದ್ದವರು ಮಾಡಿದರು.
ಉಡುಪಿಯಲ್ಲಿ ಏಪ್ರಿಲ್ 19 ರಂದು ನಡೆದ ‘ವಸಂತ ಸಂತ ಸಂದೇಶ ಮಾಲಾ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಹೇಳಿದರು.
ಪೇಜಾವರ ಶ್ರೀಗಳು ಸಾಮರಸ್ಯದ ಪ್ರಯತ್ನಗಳನ್ನು ಮಾಡಿದರು. ಇದು ಕಷ್ಟದ ಕೆಲಸ. ಆ ಸಂದರ್ಭದಲ್ಲಿ ಇಡೀ ಸಮಾಜ ಶ್ರೀಗಳ ಬೆಂಬಲಕ್ಕೆ ನಿಲ್ಲಬೇಕಿತ್ತು. ಎಲ್ಲರೂ ಹಣ್ಣಿರುವ ಮರಕ್ಕೆ ಕಲ್ಲು ಹೊಡೆಯುತ್ತಾರೆ ಹೊರತೂ ಗೊಡ್ಡು ಮರಕ್ಕೆ ಕಲ್ಲು ಹೊಡೆಯುವುದಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.
ಪೇಜಾವರ ಶ್ರೀಗಳು ಮಾತನಾಡುತ್ತಾ, ಕೆಲ ವರ್ಷಗಳ ಹಿಂದೆ ದಲಿತ ಕೇರಿಗೆ ಪಾದಯಾತ್ರೆ ಹಾಗೂ ಮೈಸೂರಿನಲ್ಲಿ ನಡೆದಂತಹ ಬ್ರಾಹ್ಮಣ ಕೇರಿಯಲ್ಲಿ ಮಾದರ ಚೆನ್ನಯ್ಯ ಸ್ವಾಮೀಜಿಯವರು ಮಾಡಿದ ಪಾದಯಾತ್ರೆಗಳ ಕುರಿತು ಮಾತನಾಡಿದರು.
ಟೀಕೆ ಮಾಡುವವರು ಸಮಾಜದಲ್ಲಿ ಇದ್ದೇ ಇರುತ್ತಾರೆ. ಗೊತ್ತು ಗುರಿಯಿಲ್ಲದೆ, ಪ್ರಾಮಾಣಿಕತೆಯಿಲ್ಲದೆ ಪ್ರಶ್ನಿಸುತ್ತಾರೆ. ಹೀಗೆ ಎಂದು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕೆಂದಿಲ್ಲ ಎಂದು ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.