ರೇಖಾ ಮಿಶ್ರಾ ರೈಲ್ವೇ ಪೊಲೀಸ್ ಪಡೆ ಅಧಿಕಾರಿ, ಕೇವಲ ಒಂದು ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರೈಲ್ವೇ ಪೊಲೀಸರು ಇದುವರೆಗೆ ರಕ್ಷಿಸಿದ 1150 ಮಕ್ಕಳ ಪೈಕಿ ರೇಖಾ ಒಬ್ಬರೇ 434 ಮಕ್ಕಳನ್ನು ರಕ್ಷಿಸಿದ್ದಾರೆ, ಇದು ಅವರ ಮಹತ್ವದ ಸಾಧನೆ. ಸಿಎಸ್ಟಿ ಮುಂಬಯಿಯಲ್ಲಿ ನಿಯೋಜನೆಗೊಂಡಿರುವ ಅವರು ಸ್ಟೇಶನ್ನಲ್ಲಿ ಸಮಸ್ಯೆಗೊಳಪಟ್ಟು, ದಿಕ್ಕು ಕಾಣದೆ ಅಡ್ಡಾಡ್ಡುತ್ತಾ ಇದ್ದ ಮಕ್ಕಳಿಗೆ ಮರುಜನ್ಮ ನೀಡಿದ ಸಾಧಕಿ.
ಅಹ್ಮದಾಬಾದ್ನವರಾದ ಇವರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಗಮನಿಸುವುದನ್ನು ನನಗೆ ನನ್ನ ಮೂಲ ಶಿಕ್ಷಣ ಹೇಳಿಕೊಟ್ಟಿದೆ ಎನ್ನುತ್ತಾರೆ.
ನಿತ್ಯ 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಅವರು ಬೇಸರಗೊಂಡು ಯಾರು ಇಲ್ಲದೆ ಅಡ್ಡಾಡುವ ಮಕ್ಕಳತ್ತ ಹೆಚ್ಚು ಗಮನ ಕೊಡುತ್ತಾರೆ. ಅವರ ಬಳಿಗೆ ಹೋಗಿ ನಯವಾಗಿ ಮಾತನಾಡಿ ಅವರ ವಿಶ್ವಾಸ ಗಳಿಸುತ್ತಾರೆ ಬಳಿಕ ಸಮಸ್ಯೆಯನ್ನು ತಿಳಿದುಕೊಳ್ಳುತ್ತಾರೆ ಮತ್ತು ಅವರನ್ನು ಅವರ ಪೋಷಕರಿಗೆ ತಲುಪಿಸುವ ಕಾರ್ಯ ಮಾಡುತ್ತಾರೆ.
ಅತಂತ್ರರು, ದಿಕ್ಕುತೋಚದವರು, ಸಮಸ್ಯೆಯಲ್ಲಿರುವವರು ಹೆಚ್ಚಾಗಿ ರೈಲ್ವೇಯ ಕೊನೆಯ ನಿಲ್ದಾಣದಲ್ಲಿ ಬಂದಿಳಿಯುತ್ತಾರೆ. ಹೀಗಾಗೀ 434 ಮಕ್ಕಳನ್ನು ರಕ್ಷಿಸಿರುವುದರ ಹಿಂದೆ ಈ ಸ್ಟೇಶನ್ನಿ ನ ಪಾತ್ರವೂ ಇದೆ ಎಂದು ಮಿಶ್ರಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.