×
Home About Us Advertise With s Contact Us

ಮಂಗಳೂರಿನಲ್ಲಿ ಬಿಜೆಪಿ ವೈದ್ಯಕೀಯ ಶಿಬಿರ ಉದ್ಘಾಟನೆ

ಮಂಗಳೂರು : ಭಾರತರತ್ನ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೆಡ್ಕರ್ ರವರ ಜನ್ಮದಿನ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ದಿನಾಂಕ 16-4-2017  ಭಾನುವಾರದಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವೈದ್ಯಕೀಯ ಶಿಬಿರವನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಉದ್ಘಾಟಿಸಿದರು.

ರಾಜ್ಯ ವೈದ್ಯಕೀಯ ಪ್ರಕೋಷ್ಠ ಸಹಸಂಚಾಲಕ, ಕುಟುಂಬ ಹಾಗೂ ಸಕ್ಕರೆಕಾಯಿಲೆ ತಜ್ಣರಾದ ಡಾ|ಎಂ ಅಣ್ಣಯ್ಯ ಕುಲಾಲ್, ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಂಚಾಲಕ, ರೇಡಿಯಾಲಾಜಿಸ್ಟ್‌ರಾದ ಡಾ|ರಾಘವೇಂದ್ರ ಭಟ್, ಕಾಯಿಲೆಶಾಸ್ತ್ರ ತಜ್ಣರಾದ ಡಾ|ಸುಕೇಶ್, ವೈದ್ಯಕೀಯ ತಜ್ಣರಾದ ಡಾ|ರೋಶನ್, ನೇತ್ರ ತಜ್ಣರಾದ ಡಾ| ಪ್ರಶಾಂತ್, ಹೃದಯ ತಜ್ಣರಾದ ಡಾ|ಅಕ್ಷಯ್, ಡಾ|ಅನಂತಪ್ರಸಾದ, ಡಾ|ಚಂದ್ರಶೇಖರ್, ಡಾ|ಸುಧೀಂದ್ರ, ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷರಾದ ವೇದವ್ಯಾಸ ಕಾಮತ್, ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು, ಪೂಜಾ ಪೈ, ಮತ್ತು ಸಂಧ್ಯಾ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top