ಮಂಗಳೂರು : 59 – ಜೆಪ್ಪು ವಾರ್ಡ್ನ ಜಪ್ಪು-ಕುಡ್ಪಾಡಿಯ ಅಂಗನವಾಡಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್ನ ನೊಂದಾವಣೆ ಶಿಬಿರ – ಕಾರ್ಯಕ್ರಮವು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗು ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರ ನಿರ್ದೇಶನದಲ್ಲಿ ಮತ್ತು ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಡಿ.ವೇದವ್ಯಾಸ್ ಕಾಮತ್ರವರ ಮೇಲು ಉಸ್ತುವಾರಿಯಲ್ಲಿ ಮತ್ತು ಜಪ್ಪು ವಾರ್ಡ್ನ ಬಿ.ಜೆ.ಪಿ ಅಧ್ಯಕ್ಷರಾದ ಭರತ್ ಕುಮಾರ್ ಎಸ್ ರವರ ನೇತೃತ್ವದಲ್ಲಿ ತಾ:09.04.2017 ಮತ್ತು 10.04.2017ರಂದು ಜರುಗಿತು.
ಪ್ರಧಾನಿ ಶ್ರೀ ನರೇಂದ್ರ ಮೋದಿರವರ ಡಿಜಿಟಲ್ ಇಂಡಿಯಾದ ಪರಿಕಲ್ಪನೆ ಹಾಗು ಪಾರದರ್ಶಕ ಮತ್ತು ಕಾಗದರಹಿತ ಆಡಳಿತವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಡಿಜಿಟಲ್ ಲಾಕರ್ಗೆ ಹೆಸರು ನೊಂದಾಯಿಸಿ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಶಿಬಿರದಲ್ಲಿ ಸಾರ್ವಜನಿಕರು ಬಲು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹೆಸರುಗಳನ್ನು ನೊಂದಾಯಿಸಿ ಶ್ರೀ ನರೇಂದ್ರ ಮೋದಿಯರವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಉತ್ತಮ ಬೆಂಬಲವನ್ನು ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರಸ್ತುತ ಎಲ್ಲರೂ ನಗದು ರಹಿತ ವ್ಯವಹಾರ, ಇ-ಪೇಮೆಂಟ್ಸ್ ಮತ್ತು ಡಿಜಟಲೀಕರಣದ ಕಡೆಗೆ ಒಲವು ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸುವಲ್ಲಿ ಡಿಜಿಟಲ್ ಲಾಕರ್ ಪ್ರಮುಖ ಪಾತ್ರವನ್ನು ವಹಿಸಲಿದೆ. ಪಾನ್ ಕಾರ್ಡ್, ಪಾಸ್ಪೋರ್ಟ್, ಜನ್ಮ ದಾಖಲೆ, ಭೂ ದಾಖಲೆ, ಮತದಾನ ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣ ಪತ್ರ, ಚಾಲನಾ ಪರಾವನಿಗೆ ಮುಂತಾದ ಸರಕಾರ ನೀಡಿರುವ ಎಲ್ಲಾ ದಾಖಲೆಗಳನ್ನು ಈ ವ್ಯವಸ್ಥೆಯಡಿಯಲ್ಲಿ ಸಂರಕ್ಷಿಸಿಡಬಹುದಾಗಿದೆ. ಇದರಿಂದ ಮಹತ್ವದ ದಾಖಲೆಗಳು ಕಳೆದು ಹೋಗುವ, ಹಾನಿಗೊಳಗಾಗುವ ಭೀತಿಯಿರದೆ ಬೇಕಾದಾಗ ಪಡೆಯಬಹುದಲ್ಲದೆ, ಯಾವುದೇ ಸರಕಾರಿ ಸೇವೆಯನ್ನು ಕಡಿಮೆ ಅವಧಿಯಲ್ಲಿ ಸುಲಭವಾಗಿ ಪಡೆಯಬಹುದಾಗಿದೆ.
ಹೊಸ ಆಧಾರ್ ಕಾರ್ಡ್ ನೊಂದಾವಣೆ ಮತ್ತು ಆಧಾರ್ ಕಾರ್ಡ್ನ ಮಾಹಿತಿ ತಿದ್ದುಪಡಿಯ ಸೇವೆಯನ್ನು ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದರು. ಈ ಶಿಬಿರದಲ್ಲಿ ಒಟ್ಟು 325 ಜನರು ಡಿಜಿಟಲ್ ಲಾಕರ್ಗೆ ಹೆಸರನ್ನು ನೊಂದಾಯಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಂಡಲದ ಸದಸ್ಯರಾದ ದೀಪಕ್ ಪೈ, ಉಮಾನಾಥ್ ಶೆಟ್ಟಿಗಾರ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಅನಿಲ್ ಕುಮಾರ್, ವಾರ್ಡ್ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜೆ. ಸುರೇಖಪ್ರಸಾದ್, ಬೂತ್ ಅಧ್ಯಕ್ಷರಾದ ಶ್ರೀಮತಿ ಅಮಿತಾ, ಸದಸ್ಯರಾದ ಅರುಣ್ ಕುಮಾರ್ ಸುವರ್ಣ, ಪುಂಡಲೀಕ ಸುವರ್ಣ, ದೇವಾನಂದ್ ಸನಿಲ್, ಶಿವವಪ್ರಸಾದ್ ಕೆ.ಪಿ, ಶಿವಾನಂದ, ಗಣೇಶ್, ಕುಸುಮ ಶೆಟ್ಟಿಗಾರ್, ರಾಜೇಶ್ವರಿ, ಪ್ರಮೀಳಾ, ಶುಭಾ,ಮೋಹನ್, ಸಂದೀಪ್ ಕೊಟ್ಟಾರಿ, ಶೈಲೇಶ್ ಶೆಟ್ಟಿ ಹಾಗು ಬಾಲ ವಿಕಾಸದ ಸದಸ್ಯ ಉಮೇಶ್ ರವರು ಉಪಸ್ಥಿತರಿದ್ದರು. ಅಮಿತ್ ಶೆಟ್ಟಿ, ಉಮೇಶ್ ಎಂ.ಆರ್ ಭಟ್ ಲೇನ್ ಹಾಗು ಶೈಲೇಶ್ ಭಗವತಿ ಕೇಟರರ್ಸ್ ಸಹಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.