ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿನ ಇಸಿಸ್ ಉಗ್ರರನ್ನು ಗುರಿಯಾಗಿಟ್ಟುಕೊಂಡು ಅಮೆರಿಕಾ ಸೇನಾ ಪಡೆಗಳು 20 ಸಾವಿರ ಪೌಂಡ್ ತೂಕದ ಬಾಂಬ್ನ್ನು ಸ್ಫೋಟಿಸಿವೆ.
ಅಫ್ಘಾನ್ನ ಅಚಿನ್ ಜಿಲ್ಲೆಯ ನಂಗಹ್ರರ್ ಪ್ರಾಂತ್ಯದ ‘ಟನಲ್ ಕಾಂಪ್ಲೆಕ್ಸ್’ ಮೇಲೆ ಜಿಬಿಯು-43/ಬಿ ಎಂಬ ಬೃಹತ್ ಶಸ್ತ್ರಾಗಾರ ವಾಯು ಸ್ಫೋಟ ಬಾಂಬ್ನ್ನು ಅಮೆರಿಕಾ ಪಡೆಗಳು ಹಾಕಿವೆ. ನಿನ್ನೆ ರಾತ್ರಿ 7.32ಕ್ಕೆ ಈ ದಾಳಿ ನಡೆದಿದೆ.
ಜಿಬಿಯು-43/ಬಿ ಅತೀದೊಡ್ಡ ಪರಮಾಣುಯೇತರ ಬಾಂಬ್ ಆಗಿದೆ, ಇದನ್ನು ಎಂಸಿ-130 ವಿಮಾನದ ಮೂಲಕ ಅಫ್ಘಾನ್ಗೆ ಕೊಂಡೊಯ್ಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಐಇಡಿ, ಬಂಕರ್, ಟನಲ್ಗಳನ್ನು ಬಳಸಿ ತಮ್ಮ ರಕ್ಷಣೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ ನಡೆಸುತ್ತಿರುವ ಇಸಿಸ್ಗೆ ಅಮೆರಿಕಾ ನಡೆಸಿದ ಈ ದಾಳಿಯಿಂದ ಸಾಕಷ್ಟು ನಷ್ಟವುಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೇನೆಯ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.