ಏಪ್ರಿಲ್ 13, 1919 ಜಲಿಯನ್ವಾಲಾಭಾಗ್ ಹತ್ಯಾಕಾಂಡ
ಹೌದು ಅಂದು ಸುಮಾರು 1500 ಜನರು ಡಯಾರ್ ಎಂಬ ಬ್ರಿಟಿಷ್ ಅಧಿಕಾರಿಯ ಕ್ರೌರ್ಯಕ್ಕೆ ಬಲಿಯಾಗಿದ್ದರು. ಬ್ರಿಟಿಷರು ಭಾರತದ ಮೇಲೆ ಮಾಡಿದ ದೌರ್ಜನ್ಯವನ್ನು, ಅನ್ಯಾಯವನ್ನು ಇಲ್ಲಿನ ಗೋಡೆಗಳೆ ಸಾರಿ ಹೇಳುತ್ತಿವೆ.
ಏಪ್ರಿಲ್ 13 ರ ಕರಾಳ ದಿನ
ಬಂದೇ ಬಿಟ್ಟಿತು ಜಲಿಯನ್ವಾಲಾ ಬಾಗ್ ಹತ್ಯಾಹಾಂಡದ ಕರಾಳ ದಿನ – ಅಮೃತಸರದಲ್ಲಿರುವ ಜಲಿಯನ್ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ 13, 1919 ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಹಾಗು ಗಾಯಗೊಂಡವರ ಸಂಖ್ಯೆ 1200 ಕ್ಕೂ ಹೆಚ್ಚು ಮತ್ತು ಸಿವಿಲ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಸ್ಮಿತ್ ನೀಡಿದ ಮಾಹಿತಿಯ ಪ್ರಕಾರ, ಸಾವಿಗೀಡಾದವರು 1800 ಕ್ಕೂ ಹೆಚ್ಚು. ಈ ಅಂಕಿಅಂಶಗಳು ರಾಜಕೀಯ ಕಾರಣಗಳಿಂದಾಗಿ ಎಂದಿಗೂ ಧೃಢಪಟ್ಟಿಲ್ಲ.
ಅದು ಸಿಖ್ಖರ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ದಿನ. ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿ ರೂಪುಗೊಂಡಿತ್ತು. ಅಲ್ಲಿ ಮಹಿಳೆಯರು ಪುರುಷರು ಮಕ್ಕಳು ಸೇರಿ ಎಲ್ಲರೂ ಆನಂದದಿಂದ ಹಬ್ಬವನ್ನು ಆಚರಿಸುತ್ತಿದ್ದರು.
ಆದರೆ ಅದು ಅವರ ಪಾಲಿನ ಕಡೆಯ ಹಬ್ಬವಾಗಿ ಹೋಯಿತು. ಯಾರೂ ಕಂಡರಿಯದ ರೀತಿಯಲ್ಲಿ ಅಲ್ಲಿಗೆ ತನ್ನ ಸೈನ್ಯದೊಂದಿಗೆ ಬಂದ ಬ್ರಿಟೀಷ್ ಅಧಿಕಾರಿ ಜೆ. ಡಾಯರ್ “FIRE” ಎಂದು ಕೂಗಿದ ತಕ್ಷಣ ಬ್ರಿಟೀಷ್ ಸೈನ್ಯದಿಂದ ಗುಂಡಿನ ದಾಳಿ ನಡೆಯಿತು ಅಲ್ಲಿಗೆ ಎಲ್ಲವೂ ಅಸ್ತವ್ಯಸ್ತವಾಗಿ ಹೋಯಿತು ನೆರೆದಿದ್ದವರು ಓಡಲೂ ಕೂಡ ಅವಕಾಶ ಸಿಗದೇ ಗುಂಡಿಗೆ ಬಲಿಯಾಗಬೇಕಾಯಿತು. ಅಲ್ಲಿ ಮಕ್ಕಳು ಸ್ತ್ರೀಯರು ಪುರುಷರು ಹಲವರು ಬ್ರಿಟೀಷರ ಗುಂಡಿನಿಂದ ರಕ್ಷಿಸಿಕೊಳ್ಳಲು ಅಲ್ಲಿದ್ದ ಬಾವಿಗೆ ಧುಮುಕಿದರು. ಆದರೂ ಸಾವು ಅವರನ್ನು ಬಿಡಲಿಲ್ಲ. ಅಲ್ಲಿ ಮೃತಪಟ್ಟವರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಬೈಸಾಖಿಯ ಹಬ್ಬ ರಕ್ತದೋಕುಳಿಯಾಗಿ ಪರಿವರ್ತನ ಗೊಂಡಿತ್ತು.
ಭಾರತ ಎಂದೂ ಮರೆಯದ ದುರ್ಘಟನೆ ಅದು.
ಇಂದಿಗೆ ಆ ಕರಾಳ ದಿನ ನೆಡೆದು 98 ವರ್ಷಗಳು ಕಳೆದವು, ಒಮ್ಮೆ ಆ ಹುತಾತ್ಮರನ್ನು ನೆನೆಯೋಣ…
ವಂದೇ ಮಾತರಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.