ನವದೆಹಲಿ: ಪ್ರತಿ ಸಿಖ್ ದಂಪತಿಗಳು ಕನಿಷ್ಠ 3ಮಕ್ಕಳನ್ನು ಹೊಂದಬೇಕು ಎಂದು ಹೇಳಿಕೆ ನೀಡುವ ಮೂಲಕ ಸಿಖ್ ಧರ್ಮಗುರುವೊಬ್ಬರು ವಿವಾದ ಸೃಷ್ಟಿಸಿದ್ದಾರೆ.
ಅಖಾಲ್ ತಕ್ತ್ನ ಮುಖಂಡ ಗಿಯಾನಿ ಗುರುಬಚನ್ ಸಿಂಗ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಸಿಖ್ ಸಮುದಾಯದ ಕುಂಠಿತವಾಗುತ್ತಿರುವ ಜನಸಂಖ್ಯೆಯನ್ನು ಸರಿ ಮಾಡಲು ಇದೊಂದೆ ಮಾರ್ಗ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಸ್ಲಿಂ ಕುಟುಂಬಗಳು ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದುತ್ತಿವೆ, ಅದಕ್ಕಾಗಿ ಅವರಿಗೆ ರಾಜಕೀಯದಲ್ಲಿ ಪ್ರಾಮುಖ್ಯತೆ ಸಿಗುತ್ತಿದೆ. ರಾಜಕೀಯ ವೋಟ್ ಬ್ಯಾಂಕನ್ನು ಅವಲಂಭಿಸಿದೆ, ಮುಸ್ಲಿಂರು ದೊಡ್ಡ ವೋಟ್ ಬ್ಯಾಂಕುಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆಯೂ 3 ಮಕ್ಕಳನ್ನು ಹೊಂದುವಂತೆ ಸಿಖ್ಖರಿಗೆ ನಾನು ಹೇಳಿದ್ದೆ, ಕೇವಲ ಶೇ.1ರಷ್ಟು ಜನ ಮಾತ್ರ ನನ್ನ ಐಡಿಯಾವನ್ನು ವಿರೋಧಿಸಿದ್ದರು, ಉಳಿದವರು ಸಮರ್ಥಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅವರ ಈ ಹೇಳಿಕೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.