ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಇದೀಗ ಒಂದು ಚಳುವಳಿಯಾಗಿ ರೂಪುಗೊಳ್ಳುತ್ತಿದೆ. ಈ ಅಭಿಯಾನದಿಂದ ಪ್ರೇರಿತಗೊಂಡ ಹಲವಾರು ಮಂದಿ ಸ್ವಚ್ಛ ರಾಷ್ಟ್ರ ನಿರ್ಮಾಣದ ಪಣತೊಟ್ಟು ಅದಕ್ಕಾಗಿ ಶ್ರಮಪಡುತ್ತಿದ್ದಾರೆ. ಸ್ವಚ್ಛತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರ ಪೈಕಿ ಅದರಿ ಕಿಶೋರ್ ಕುಮಾರ್ ಅವರೂ ಒಬ್ಬರು.
ಆಂಧ್ರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ಇವರು ಕಳೆದ 60 ದಿನಗಳಿಂದ ನಿರಂತರವಾಗಿ ತಮ್ಮನ್ನು ತಾವು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಶಾಲೆಗಳಿಗೆ, ಆಸ್ಪತ್ರೆಗಳಿಗೆ, ಆಶ್ರಮ, ಕಛೇರಿಗಳಿಗೆ, ಸಾರ್ವಜನಿಕ ಸ್ಥಳಗಳಿಗೆ ತೆರಳಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ಇವರು ತೊಡಗುತ್ತಿದ್ದಾರೆ. ಸ್ವಚ್ಛತೆಯ ಬಗ್ಗೆ ಸಂವಾದ ನಡೆಸುತ್ತಾರೆ. ಸ್ವತಃ ಟಾಯ್ಲೆಟ್ ಕ್ಲೀನ್ ಮಾಡುತ್ತಾರೆ, ಕಸಕಡ್ಡಿಗಳನ್ನು ಹೆಕ್ಕುತ್ತಾರೆ. ಈ ಮೂಲಕ ಇತರರಿಗೂ ಸ್ವಚ್ಛತೆ ಮಾಡಲು ಇವರು ಪ್ರೇರೇಪಣೆ ನೀಡುತ್ತಾರೆ. ಅಲ್ಲದೇ ಜನರು, ಮಕ್ಕಳಿಂದ ಸ್ವಚ್ಛತಾ ಪ್ರತಿಜ್ಞೆಯನ್ನು ಮಾಡಿಸುತ್ತಿದ್ದಾರೆ.
ಜನರು, ವಿದ್ಯಾರ್ಥಿಗಳು ರಸ್ತೆಗಳಿದು ದಿನದಲ್ಲಿ 5 ನಿಮಿಷವಾದರೂ ಸ್ವಚ್ಛತೆಯಲ್ಲಿ ತೊಡಗಬೇಕು, ಆಗ ಮಾತ್ರ ನಮ್ಮ ದೇಶ ಸ್ವಚ್ಛವಾಗುತ್ತದೆ ಎಂದು ಇವರು ಜನರಿಗೆ ಕರೆ ನೀಡಿದ್ದಾರೆ. ಅಲ್ಲದೇ ಕೇವಲ 60 ಅಥವಾ ನೂರು ದಿನವಲ್ಲ ಉಸಿರು ಇರುವವರೆಗೂ ನಿರಂತರವಾಗಿ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂಬ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ.
ತಾವು ನಡೆಸುತ್ತಿರುವ ಸ್ವಚ್ಛತಾ ಅಭಿಯಾನಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಅವರೇ ಭರಿಸುತ್ತಿದ್ದಾರೆ. ನನಗೆ ಪ್ರಧಾನಿ ಮೋದಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ನನಗೆ ಸ್ಫೂರ್ತಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಹಳಷ್ಟು ಸಹಕಾರ ನೀಡುತ್ತಿದ್ದಾರೆ ಎನ್ನುವ ಇವರು ಸ್ವಚ್ಛ ರಾಷ್ಟ್ರ ನಿರ್ಮಾಣದ ಕರ್ತವ್ಯವನ್ನು ನಿಷ್ಠೆಯಿಂದ ಪಾಲನೆ ಮಾಡುತ್ತಿದ್ದಾರೆ. ಅದಕ್ಕಾಗಿ ಜೀವನವನ್ನೇ ಮುಡಿಪಾಗಿಡುವ ಪಣತೊಟ್ಟಿದ್ದಾರೆ.
ಕಿಶೋರ್ ಅವರ ಈ ಕಾರ್ಯ ಇತರರಿಗೂ ಪ್ರೇರಣೆ, ಅವರ ಹಾದಿಯಲ್ಲೇ ನಾವು ನಡೆದರೆ ಭಾರತ ಬಹುಬೇಗನೇ ನಮ್ಮೆಲ್ಲರ ಕನಸಿನ ಸ್ವಚ್ಛ ಭಾರತವಾಗಿ ರೂಪುಗೊಳ್ಳುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.