ಧಾರವಾಡ: “ಯುಗಪುರುಷ – ಮಹಾತ್ಮರ ಮಹಾತ್ಮ” ನಾಟಕ ಶ್ರೀಮದ್ ರಾಜ್ಚಂದ್ರಜೀ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಒಂದು ಸ್ಫೂರ್ತಿದಾಯಕ ರೂಪಕ.
ನಗರದ ಡಾ.ಮಲ್ಲಿಕಾರ್ಜುನ ಮನಸೂರ ಕಲಾ ಭವನದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸ್ವಚ್ಛಭಾರತ್ ಅಭಿಯಾನದ ಸಹಯೋಗದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
‘ಯುಗಪುರುಷ’ ನಿಸ್ವಾರ್ಥತತೆಯಿಂದ ಸೇವೆ ಮತ್ತು ಪ್ರೀತಿ, ವೈವಿಧ್ಯತೆಯನ್ನು ಗೌರವಿಸುವ, ಸತ್ಯವನ್ನು ಬೆಂಬಲಿಸುವ, ವಿಶ್ವಾಸ ಸೃಷ್ಟಿಸುವ, ಶಾಶ್ವತ ಸಮುದಾಯಗಳನ್ನು ಕಟ್ಟುವ ವ್ಯಕ್ತಿಯ ಸಾಮರ್ಥ್ಯವನ್ನು ವಿಸ್ತರಿಸುವ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ.
ತನ್ನನ್ನು ತಾನು ಅವಲೋಕಿಸುವ, ಸತ್ಯ ಮತ್ತು ನಿರ್ಭೀತಿಯನ್ನು ಎತ್ತಿಹಿಡಿಯುವ ಹಾಗೂ ಚಾರಿತ್ರ್ಯ ಮತ್ತು ಆತ್ಮಸಾಕ್ಷಿಯನ್ನು ಪರಿವರ್ತಿಸುವ ಸತ್ವಶಾಲಿ ಅನುಭವವನ್ನು ರೂಪಕ ಮುಂಚೂಣಿಗೆ ತರುತ್ತದೆ.
ಶ್ರೀಮದ್ಜೀ ಮತ್ತು ಗಾಂಧೀಜಿಯವರ ನಡುವಿನ ಒಂದು ಪ್ರಾಮಾಣಿಕ ಸ್ನೇಹವಾಗಿ ಪ್ರಾರಂಭವಾದ ಇಬ್ಬರ ಸಂಬಂಧ ಶ್ರೀಮದ್ಜೀಯವರು ತಮ್ಮ ಆಧ್ಯಾತ್ಮಿಕ ಗುರು ಎಂದು ಗಾಂಧೀಜಿ ಘೋಷಿಸುವುದರೊಂದಿಗೆ ಅಂತ್ಯಗೊಂಡಿತು. ಶ್ರೀಮದ್ ರಾಜ್ಚಂದ್ರಜೀಯ ವರೊಂದಿಗಿನ ಸ್ಫೂರ್ತಿದಾಯಕ ಸಂವಹನ, ಪತ್ರವ್ಯವಹಾರ ಮತ್ತು ಅವರ ಆಧ್ಯಾತ್ಮಿಕ ದಾರಿಯ ಹಿಂಬಾಲಿಸುವಿಕೆಯ ಕುರಿತು ಗಾಂಧೀಜಿಯವರು ಸವೆಸಿದ ಆಂತರಿಕ ಮತ್ತು ಬಾಹ್ಯಾ ವಿಕಸನಗಳ ಕುರಿತು ಪ್ರೇಕ್ಷಕರನ್ನು ಈ ರೂಪಕ ಮಂತ್ರಮುಗ್ಧಗೊಳಿಸುತ್ತದೆ.
“ಇಂಥ ವ್ಯಕ್ತಿ ಧಾರ್ಮಿಕ ವಿಷಯಗಳಲ್ಲಿ ನನ್ನ ಹೃದಯವನ್ನು ಇಲ್ಲಿಯವರೆಗೂ ಯಾವ ವ್ಯಕ್ತಿಗೂ ಸರಿಸಾಟಿಯಿಲ್ಲದಂತೆ ಸೂರೆಗೊಂಡರು” ಎಂದು ಮಹಾತ್ಮ ಗಾಂಧಿಯವರು 1930 ಜೂನ್ 30ರಂದು ತಮ್ಮ ಮಾರ್ಡನ್ ರಿವೀವ್ನಲ್ಲಿ ಬರೆಯುತ್ತಾರೆ.
2016ರ ನವೆಂಬರ್ 14ರಂದು ಗುಜರಾತಿಯಲ್ಲಿ ಪ್ರಧಾನ ಪ್ರದರ್ಶನ ಕೈಗೊಂಡ ‘ಯುಗಪುರುಷ’ 125 ದಿನಗಳ ಅತ್ಯಂತ ಕಡಿಮೆ ಅವಧಿಯಲ್ಲಿ 250 ಪ್ರದರ್ಶನಗಳನ್ನು ಭಾರತದ ಹಲವಾರು ನಗರಗಳಲ್ಲಿ ತುಂಬಿದ ಮನೆಗಳಿಗೆ ಪ್ರದರ್ಶನದ ಜೊತೆಗೆ ಅನೇಕ ಉತ್ಸುಕರು ನಿಂತು ನೋಡುವ ಗೌರವಕ್ಕೆ ಪಾತ್ರವಾಗಿ ವಿಖ್ಯಾತಿಗೊಂಡಿದೆ. ರಾಷ್ಟ್ರಾದ್ಯಂತ ಈ ಪ್ರದರ್ಶನವನ್ನು ಈಗಾಗಲೇ 1,80,000 ಜನ ವೀಕ್ಷಿಸಿದ್ದಾರೆ.
ಶ್ರೀಮದ್ ರಾಜ್ಚಂದ್ರ ಮಿಷನ್ ಧರಮ್ಪೂರ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಂಯುಕ್ತ ಸಹಯೋಗದಲ್ಲಿ ಈ ರೂಪಕದ ಕನ್ನಡ ಅವತರಣಿಕೆಯನ್ನು ಪ್ರಸ್ತುತಪಡಿಸಲಾಗಿದೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ಗಾಂಧೀಜಿಯವರ ಸಂದೇಶಗಳನ್ನು ಪ್ರಸಾರ ಮಾಡುವ ಅನೇಕ ಉಪಕ್ರಮಗಳಿಗೆ ಮುಂದಾಗಿದೆ. ಕರ್ನಾಟಕದ ಯುವಕರು ಮತ್ತು ಜಾಗೃತ ಮನಸುಗಳಿಗೆ ಗಾಂಧೀಜಿಯವರ ವಿಚಾರಧಾರೆಯನ್ನು ತಲುಪಿಸುವ ಆಳವಾದ ಉಪಕ್ರಮ ಇದಾಗಿದೆ.
‘ಯುಗಪುರುಷ’ ಅಹಿಂಸೆ, ಸತ್ಯ, ಸ್ವಚ್ಚತೆ ಮತ್ತು ಮಹಾತ್ಮರ ಶಬ್ದಗಳಲ್ಲಿ ಸುರಕ್ಷತೆಯ ಸಂದೇಶಗಳನ್ನು ಬಿಂಬಿಸುತ್ತದೆ. ‘ಕೋಡ್ ಮಂತ್ರ’ ಖ್ಯಾತಿಯ ರಾಜೇಶ್ ಜೋಶಿ ‘ಯುಗಪುರುಷ’ ರೂಪಕವನ್ನು ನಿರ್ದೇಶಿಸಿದ್ದಾರೆ. ಮರಾಠಿ ಖ್ಯಾತಿಯ ಹೆಸರಾಂತ ಬರಹಗಾರ ಉತ್ತಮ್ ಗಡಾ ಅವರು ಬರೆದ ಕಥೆಯನ್ನಾಧರಿಸಿದೆ. ಸಂಗೀತ ನಿರ್ದೇಶನವನ್ನು ಸಚಿನ್-ಜಿಗರ್ದ್ವಯರು ಸಂಕಲನ ಗೊಳಿಸಿದ್ದಾರೆ.
ಬಹುಜನರ ಬೇಡಿಕೆಯ ಮೇರೆಗೆ ರಾಷ್ಟ್ರದ ವಿವಿಧ ನಗರಗಳಲ್ಲಿ ನಾಲ್ಕು ವಿವಿಧ ತಂಡಗಳು ಈ ರೂಪಕವನ್ನು ಏಕಕಾಲಕ್ಕೆ ಪ್ರದರ್ಶಿಸುತ್ತಿವೆ. ‘ಯುಗಪುರುಷ’ ಪ್ರಸ್ತುತವಾಗಿ ಹಿಂದಿ, ಗುಜರಾತಿ, ಕನ್ನಡ ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಇಂಗ್ಲಿಷ್, ಮರಾಠಿ, ಬೆಂಗಾಲಿ ಮತ್ತು ತಮಿಳು ಭಾಷೆಗೆ ರೂಪಾಂತರಗೊಳ್ಳಲಿದೆ.
ಮುಂಬರುವ ವರ್ಷಗಳಲ್ಲಿ ‘ಯುಗಪುರುಷ’ ರೂಪಕವು ಭಾರತದ ಎಲ್ಲ ಭಾಗಗಳಲ್ಲಿ ಅಲ್ಲದೇ ಅಮೆರಿಕ, ಕೆನಡಾ, ಬ್ರಿಟನ್, ಸಿಂಗಾಪೂರ್, ಹಾಂಕಾಂಗ್, ಮಲೇಶಿಯಾ, ಆಸ್ಟ್ರೇಲಿಯಾ, ಯುಎಇ, ಒಮನ್, ಕೀನ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶನಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.