ನವದೆಹಲಿ: ಅಧಿಕಾರಕ್ಕೆ ಬಂದ ಕೆಲವೇ ಗಳಿಗೆಯಲ್ಲಿ ಎನ್ಡಿಎ ಸರ್ಕಾರವು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಕೊಂದು ಹಾಕಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಮಸೂದೆಯನ್ನು ಸರ್ಕಾರ ಕೊಂದು ಹಾಕಿದೆ. ರೈತರ ಒಪ್ಪಿಗೆ ಪಡೆದು ಭೂಮಿ ಪಡೆಯುವತ್ತೇವೆ ಎಂದು ನಮ್ಮ ಸರ್ಕಾರ ಹೇಳಿತ್ತು, ಆದರೆ ರೈತರ ಒಪ್ಪಿಗೆಯಿಲ್ಲದೆಯೇ ಅವರ ಭೂಮಿಯನ್ನು ಕಿತ್ತು ಕೊಳ್ಳುವ ಬಗ್ಗೆ ಎನ್ಡಿಎ ಮಾತನಾಡುತ್ತಿದೆ’ ಎಂದಿದ್ದಾರೆ.
‘ಹಿಂದೆ ಕಳ್ಳರು ರಾತ್ರಿ ವೇಳೆ ಬರುತ್ತಿದ್ದರು, ಆದರೀಗ ಸೂಟು ಬೂಟು ಹಾಕಿಕೊಂಡು ಕಳ್ಳರು ಹಗಲಲ್ಲೇ ಬರುತ್ತಿದ್ದಾರೆ. ಈ ಸರ್ಕಾರ ಬಡವರ ಮತ್ತು ರೈತರ ವಿರೋಧಿಯಾಗಿದೆ. ಭೂಸ್ವಾಧೀನ ಮಸೂದೆಯನ್ನು ಸಂಸತ್ತಿನಲ್ಲಿ ತಡೆಯಲು ಸಾಧ್ಯವಾಗದೇ ಹೋದರೆ ರಸ್ತೆಯಲ್ಲಾದರೂ ತಡೆಯುತ್ತೇವೆ’ ಎಂದು ಖಾರವಾಗಿ ನುಡಿದಿದ್ದಾರೆ.
ರಾಹುಲ್ ಮಾತಿಗೆ ಪ್ರತ್ಯುತ್ತರವಾಗಿ ಬಿಜೆಪಿ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೇ, ಅವರ ಸಹೋದರಿಯ ಪತಿ ರಾಬರ್ಟ್ ವಾದ್ರಾರ ಬಗ್ಗೆ ಪ್ರಸ್ತಾಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.