ಗೋವಿನ ಬಗ್ಗೆ ಹೇಳುವುದಾದರೆ ಸಂಸ್ಕೃತದಲ್ಲಿ “ಗಾವೋ ವಿಶ್ವಸ್ಯ ಮಾತರಃ” ಎಂಬ ಮಾತಿದೆ.ಇದರ ಅರ್ಥ ಇಡೀ ಪ್ರಪಂಚಕ್ಕೆ ಗೋಮಾತೆಯೇ ತಾಯಿ. ಆದರೆ ಆ ತಾಯಿಯನ್ನೇ ಕಟುಕ ಮಕ್ಕಳು ಕೊಂದು ತಿನ್ನುತ್ತಾರಲ್ಲಾ ಎಂತಹ ವಿಪರ್ಯಾಸ ಅಲ್ಲವೇ?? ಬ್ರಿಟೀಷರ ಕಾಲದಲ್ಲಿ ಯುದ್ದದ ಸಮಯದಲ್ಲಿ ಕೋವಿಯಲ್ಲಿ ಗುಂಡು ಹಾರಿಸುವ ಮೊದಲು ಕಾಡತೂಸನ್ನು ಬಾಯಿಯಿಂದ ಕಚ್ಚಿ ನಂತರ ಕೋವಿಯೊಳಗೆ ಹಾಕಬೇಕಿತ್ತು. ಆ ಕಾಡತೂಸಿಗೆ ಗೋ ಮಾಂಸ ಹಾಗೂ ಹಂದಿ ಮಾಂಸದ ಕೊಬ್ಬನ್ನು ಸವರಿದ್ದರು. ಆ ವಿಷಯ ತಿಳಿದದ್ದಕ್ಕೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು ಎಮ್ಬ ವಿಚಾರ ನಮ್ಮೆಲ್ಲರಿಗೂ ಗೊತ್ತೇ ಇದೆ. ಹೀಗಿದ್ದರೂ ಇಂದಿನವರೆಗೂ ಗೋಮಾತೆಯನ್ನು ನಿರ್ದಯವಾಗಿ ಕೊಲ್ಲುತ್ತಾರಲ್ಲಾ ಇಂತಹವರಿಗೆ ಏನು ಹೇಳೋಣ? ಪುರಾಣದಲ್ಲ್ಲಿ ತಿಳಿಸಿರುವಂತೆ ಗೋಮಾತೆ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತ ದೇವತೆಯಲ್ಲ. ಅವಳು ಇಡೀ ಪ್ರಪಂಚಕ್ಕೇ ದೇವತೆ. ಆದ್ದರಿಂದ ಗೋಮಾತೆ ಕೇವಲ ಹಿಂದೂಗಳ ದೇವತೆ ಎನ್ನುವುದರಲ್ಲಿ ಅರ್ಥವಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಗೋಮಾತೆ ಕೇವಲ ಹಿಂದೂಗಳಿಗೆ ಸೀಮಿತ ಎಂದು ಭಾವಿಸಿ ಹಿಂದೂಗಳ ಮೇಲಿನ ದ್ವೇಷವನ್ನು ಮೂಕ ಪ್ರಾಣಿಯಾದ ಗೋ ಮಾತೆಯ ರಕ್ತದ ರುಚಿ ನೋಡುವ ಮೂಲಕ ತೀರಿಸಿಕೊಳ್ಳುತ್ತಾರಲ್ಲಾ ಇದು ನಮ್ಮೆಲ್ಲರ ದುರ್ದೈವವೇ ಸರಿ.
ಕೇವಲ ಹುಲ್ಲನ್ನು ತಿಂದು ಅಮೃತದಂತಹ ಹಾಲನ್ನು ನೀಡುವ, ಸರ್ವ ರೀತಿಯಲ್ಲಿಯೂ ಪರಿಶುದ್ಧಳಾಗಿರುವ ಗೋ ಮಾತೆಯನ್ನು ವಿಶ್ವದ ದೇವತೆ ಎಂದು ಒಪ್ಪಿಕೊಳ್ಳುವುದರಲ್ಲಿ ಯಾವುದೇ ರೀತಿಯ ದೋಷಗಳಿಲ್ಲ. ಆದರೆ ಆ ಮಹಾತಾಯಿಯನ್ನು ನಿಷ್ಕರುಣೆಯಿಂದ ಕೊಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ನೀಚ ಮನುಷ್ಯನಿಗೆ ಏನೆನ್ನಬೇಕು?? ಪುರಾಣದಲ್ಲಿ ಗೋಮಾತೆಯ ಪ್ರತಿಯೊಂದು ಅಂಗವನ್ನೂ ಒಂದೊಂದು ದೈವ ಶಕ್ತಿಗೆ ಹೋಲಿಸಲಾಗಿದೆ. ಅದರ ಎರಡು ಕೋಡು/ಕೊಂಬುಗಳಲ್ಲಿ ಸೂರ್ಯ ಚಂದ್ರರು, ಎರಡು ಕಣ್ಣುಗಳಲ್ಲಿ ಬ್ರಹ್ಮ ಹಾಗೂ ಮಹೇಶ್ವರರು, ಹಣೆಯಲ್ಲಿ ಮಹಾವಿಷ್ಣುವು ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ನಾಲ್ಕು ಕಾಲುಗಳನ್ನು ನಾಲ್ಕು ವೇದಗಳಿಗೂ, ಪಾದದ ಎಂಟು ಗೊರಸನ್ನು ಎಂಟು ದಿಕ್ಕುಗಳಿಗೂ, ಬಾಲವನ್ನು ಸರ್ಪಕ್ಕೆ ಹೋಲಿಸಲಾಗಿದೆ. ಕೆಚ್ಚಲಿನಲ್ಲಿ ಅಮೃತವೇ ತುಂಬಿದೆ ಎಂದು ನಂಬಿದ್ದೇವೆ ಹಾಗೂ ಅದರ ದೇಹದ ಪ್ರತಿಯೊಂದು ರೋಮದಲ್ಲೂ ಮುವತ್ಮೂರು ಕೋಟಿ ದೇವತೆಗಳು ಅಡಗಿರುವರೆಂದು ನಂಬಿರುವ ನಮಗೆ ಹಾಗೂ ಆ ನಮ್ಮ ನಂಬಿಕೆಗೆ ಮೋಸ ಹಾಗೂ ಅವಮಾನ ಮಾಡುವಂತಹ ಕೃತ್ಯಗಳು ನಡೆಯುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ.
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಗೋಮಾತೆಯನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತಿದೆ. ಇಲ್ಲಿ ಪಶು ಸಂಪತ್ತು ಮತ್ತು ಗೋಮಾತೆ ದೇಶದ ಜೀವಾಳವಾಗಿದೆ. ಭಾರತದಲ್ಲಿ ಗೋವು ವಂಶ ರಕ್ಷಣೆ ಜೊತೆಯಲ್ಲಿಯೆ ಸಂವರ್ಧನ ಆಗಬೇಕು.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಕೇವಲ ಮುಸ್ಲೀಮರಷ್ಟೇ ಅಲ್ಲ ಕೆಲ ಹಿಂದೂಗಳು ಹಾಗೂ ಬೇರೆ ಧರ್ಮದವರೂ ಸಹ ಗೋಮಾಂಸ ಸೇವಿಸುತ್ತಾರೆ. ಆದರೆ ಅದರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಗೋ ಮಾಂಸ ತಿನ್ನುವ ನನ್ನ ಹಿಂದೂ ಬಾಂಧವರಲ್ಲಿ ಒಂದು ವಿನಮ್ರ ವಿನಂತಿ. ಸಾಮಾನ್ಯವಾಗಿ ನಾವು ಹಿಂದೂಗಳು ತಾಯಿಯ ಮಹತ್ವವನ್ನು ತಿಳಿದುಕೊಂಡಿರುತ್ತೇವೆ. ಆದ್ದರಿಂದ ಗೋ ಮಾಂಸವನ್ನು ತಿಂದರೆ ನಮ್ಮ ನಮ್ಮ ತಾಯಿಯ ಮಾಂಸ ತಿಂದಷ್ಟು ಪಾಪ ಸುತ್ತಿಕೊಳ್ಳುತ್ತದೆ. ಆದ್ದರಿಂದ ದಯವಿಟ್ಟು ಗೋಮಾಂಸವನ್ನು ತಿನ್ನುವ ವಿಕೃತ ಕ್ರಿಯೆಗೆ ಇಂದೇ ಅಂತ್ಯಸಂಸ್ಕಾರ ಮಾಡೋಣ. ಬೇರೆ ಸಮುದಾಯದವರಿಗೂ ನಮಗೆ ತಿಳಿದ ಮಟ್ಟಿಗೆ ತಿಳಿ ಹೇಳೋಣ. ಎಲ್ಲಾ ಧರ್ಮದವರೂ ಒಟ್ಟಾಗಿ ಗೋ ಮಾತೆಯ ಕಣ್ಣೀರನ್ನು ಒರೆಸುತ್ತಾ ಆ ಮಹಾಮಾತೆಯ ರಕ್ಷಣೆಗೆ ಶ್ರಮಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.