ನವದೆಹಲಿ: ಐಎಫ್ಎಸ್ ಅಧಿಕಾರಿ ರಾಜೀವ್ ಕುಮಾರ್ ಚಂದೆರ್ ಅವರನ್ನು ಜಿನೆವಾದಲ್ಲಿನ ವಿಶ್ವಸಂಸ್ಥೆ ರಾಯಭಾರಿ ಮತ್ತು ಭಾರತದ ಖಾಯಂ ಪ್ರತಿನಿಧಿಯನ್ನಾಗಿ ನೇಮಕಗೊಳಿಸಲಾಗಿದೆ.
ಚಂದೆರ್ ಅವರು1983ರ ಇಂಡಿಯನ್ ಫಾರಿನ್ ಸರ್ವಿಸ್ ಬ್ಯಾಚ್ಗೆ ಸೇರಿದವರಾಗಿದ್ದಾರೆ.
2015ರ ಆಗಸ್ಟ್ನಿಂದ ಇವರು ವ್ಯಾಂಕೋವರ್ನ ಭಾರತೀಯ ಕಾನ್ಸುಲ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತಿಹಾಸ ಮತ್ತು ಕಾನೂನಿನಲ್ಲಿ ಇವರು ಪದವಿ ಮಾಡಿದ್ದಾರೆ. 2006 ಮತ್ತು 2009ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಯೋಜನೆಯ ಉಪ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.