ಲಖನೌ: ಖಡಕ್ ಸನ್ಯಾಸಿ ಯೋಗಿ ಆದಿತ್ಯಾನಂದ ಮುಖ್ಯಮಂತ್ರಿ ಆದ ತತ್ ಕ್ಷಣದಿಂದಲೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳು, ಅನಿರೀಕ್ಷಿತ ಘಟನೆಗಳು ಜರುಗುತ್ತಿವೆ.
ರಾಮ ಮಂದಿರ ನಿರ್ಮಾಣದ ವಿಚಾರ ಮತ್ತೆ ಬಲ ಪಡೆದಿದೆ. ನ್ಯಾಯಾಲಯದ ಹೊರಗಡೆಯೇ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ. ಈ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ಮುಸ್ಲಿಂರು ಬ್ಯಾನರ್ ಹಾಕಿದ್ದು ಗಮನ ಸೆಳೆಯುತ್ತಿದೆ.
ರಾಮ ಮಂದಿರ ನಿರ್ಮಾಣ ಮುಸ್ಲಿಂ ಕರ ಸೇವಕ ಸಂಘದ ಅಧ್ಯಕ್ಷ ಅಜಂ ಖಾನ್ ನೇತೃತ್ವದಲ್ಲಿ 10 ಬ್ಯಾನರ್ಗಳನ್ನು ಹಾಕಲಾಗಿದೆ. ಅಲ್ಲದೇ ತಮ್ಮ ಸಮುದಾಯದಲ್ಲೇ ಈ ಕುರಿತು ಜಾಗೃತಿ ಮೂಡಿಸಲು ಸಮಾನ ಮನಸ್ಕರ ತಂಡವನ್ನೂ ಅವರು ರೂಪಿಸುತ್ತಿರುವುದಾಗಿ ತಿಳಿದುಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.