
ನಮ್ಮ ಸ್ವಂತ ದೇಶದಲ್ಲಿ ನಾವು ನಿರಾಶ್ರಿತರಾದರೆ ಆ ನೋವು ಹೇಗಿರಬಹುದು ಊಹಿಸಬಹುದೇ? ಖಂಡಿತ ಸಾಧ್ಯವಾಗುವುದಿಲ್ಲ. ಆದರೆ ಕಾಶ್ಮೀರಿ ಪಂಡಿತರಿಗೆ ಆ ನೋವಿನ ಆಳ ತಿಳಿದಿದೆ. ಆ ನೋವಿನ ತೀವ್ರತೆಯನ್ನು ಇಂದಿಗೂ ಅವರು ಅನುಭವಿಸುತ್ತಿದ್ದಾರೆ. ಅದು ಜನವರಿ 19, 1990 – ಇದು ಕಾಶ್ಮೀರಿ ಹಿಂದೂಗಳ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಭಯಾನಕ ರಾತ್ರಿ. ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಭಯೋತ್ಪಾದಕರ ಯೋಜಿತ ಷಡ್ಯಂತ್ರದಿಂದಾಗಿ, ಕಾಶ್ಮೀರ ಕಣಿವೆಯ ಮೂಲ ನಿವಾಸಿಗಳನ್ನು ಬಂದೂಕಗಳ ಮೂಲಕ ಬೆದರಿಸಿ ಹೊರಹಾಕಲಾಯಿತು. ಹಿಂಸಾಚಾರ, ಅಪಹರಣ, ಚಿತ್ರಹಿಂಸೆಗಳು ಅವರನ್ನು ಅವರ ಸ್ವಂತ ಭೂಮಿಯಲ್ಲೇ ನಿರಾಶ್ರಿತರನ್ನಾಗಿ ಮಾಡಿದವು. ಕಾಶ್ಮೀರಿ ಪಂಡಿತರ ಯಾತನೆ, ಅವರ ಹೋರಾಟ ಮತ್ತು ಕರಾಳ ಇತಿಹಾಸವನ್ನು ಭಾರತೀಯರಾದ ನಾವು ಮರೆತರೆ ಅದು ನಮಗೇ ನಾವೇ ಮಾಡಿಕೊಳ್ಳುವ ಅನ್ಯಾಯವೇ ಆಗುತ್ತದೆ. ಕಾಶ್ಮೀರದಲ್ಲಿ ಅಂದು ನಡೆದ ಆ ಘಟನೆ ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕಾದರೂ ನೋವು ಅದರತ್ತ ಬೆಳಕು ಚೆಲ್ಲಲೇ ಬೇಕಾಗಿದೆ.
ಆ ಕ್ರೌರ್ಯದ ಅತ್ಯಂತ ಹೃದಯವಿದ್ರಾವಕ ಅಧ್ಯಾಯಗಳಲ್ಲಿ ಒಂದು – ಗಿರಿಜಾ ಕುಮಾರಿ ಟಿಕು ಅವರ ಕಥೆ.
ಗಿರಿಜಾ ಕುಮಾರಿ ಟಿಕು ಬಾರಾಮುಲ್ಲಾ ಜಿಲ್ಲೆಯ ಬಂಡಿಪೋರಾ ಪ್ರದೇಶದ ಅರಿಗಮ್ನವರು. ಆಗ ಅವರ ವಯಸ್ಸು ಕೇವಲ 22. 60 ವರ್ಷದ ತಾಯಿ, 25 ವರ್ಷದ ಪತಿ, 4 ವರ್ಷದ ಮಗ ಮತ್ತು 2 ವರ್ಷದ ಮಗಳು ಇದ್ದ ಸುಂದರ ಕುಟುಂಬ ಅವರದ್ದು. ಟ್ರೆಹ್ಯಾಮ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಯೋಗಾಲಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಜೂನ್ 1990ರಲ್ಲಿ, ಸಂಬಳ ಪಡೆಯಲು ಶಾಲೆಗೆ ಹೋಗಿದ್ದರು. ಹಿಂತಿರುಗುವಾಗ ಅದೇ ಹಳ್ಳಿಯ ಮುಸ್ಲಿಂ ಸಹೋದ್ಯೋಗಿಯನ್ನು ಭೇಟಿಯಾಗಿದ್ದರು. ಅವನು ಅವರನ್ನು ತನ್ನ ಮನೆಗೆ ಆಹ್ವಾನಿಸಿದ್ದ– ಗಿರಿಜಾ ಅನಾಗರಿಕ ಕ್ರೌರ್ಯದ ಬಗ್ಗೆ ತಿಳಿಯದೆಯೇ ಆತನ ಆಹ್ವಾನವನ್ನು ಸ್ವೀಕರಿಸಿದರು.
ಆತನ ಮನೆಗೆ ತೆರಳುತ್ತಿದ್ದಂತೆ ಅವರನ್ನು ಕೋಣೆಯಲ್ಲಿ ಕೂಡಿಹಾಕಿ ಬೀಗ ಜಡಿದುಬಿಟ್ಟ. ನಂತರ ನಾಲ್ವರು ಮುಸ್ಲಿಂ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದ. ಹಲವು ದಿನಗಳ ಕಾಲ ನಿರಂತರ ಯಾತನೆಯನ್ನು ಗಿರಿಜಾ ಅನುಭವಿಸಿದರು. ಜೂನ್ 25, 1990ರಂದು ಐದು ಜಿಹಾದಿಗಳು ಅವಳನ್ನು ಜೀವಂತವಾಗಿರುವಾಗಲೇ ಮರ ಕಡಿಯುವ ಯಂತ್ರದ ಗರಗಸದಿಂದ ಅವರ ಗರ್ಭಕೋಶವನ್ನು ಮೇಲಕ್ಕೆ ಎರಡು ಭಾಗಗಳಾಗಿ ಕತ್ತರಿಸಿ ತುಂಡುಗಳನ್ನು ರಸ್ತೆಯ ಪಕ್ಕದಲ್ಲಿಯೇ ಎಸೆದು ಪೈಶಾಚಿಕ ಕೃತ್ಯ ಎಸಗಿದರು.
ಗಿರಿಜಾ ಟಿಕು ಅವರ ಕಥೆ ಇಂದು ಕಾಶ್ಮೀರಿ ಪಂಡಿತರ ನರಮೇಧದ ಸಂಕೇತವಾಗಿದೆ – ಅಸಂಖ್ಯಾತ ಹಿಂದೂಗಳು ಇಸ್ಲಾಮಿಕ್ ಕ್ರೌರ್ಯಕ್ಕೆ ಹೇಗೆ ಬಲಿಯಾದರು ಎಂಬುದಕ್ಕೆ ಒಂದು ಸಂಕೇತವಾಗಿದೆ.
ಇಂತಹ ಕ್ರೂರತ್ವಗಳೇ ಹಿಂದೂ ವಲಸೆಗೆ ಕಾರಣವಾದವು
ಜನವರಿ 19, 1990ರಂದು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಮತ್ತು ಇಸ್ಲಾಮಿಕ್ ಮೂಲಭೂತವಾದಿಗಳು ವ್ಯವಸ್ಥಿತವಾಗಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡರು. ಶತಮಾನಗಳ ಸಹಬಾಳ್ವೆಯ ಸಂಪ್ರದಾಯವನ್ನು ಛಿದ್ರಗೊಳಿಸಿ ಭಯಾನಕ ದಂಗೆ ನಡೆಸಿದರು.
ಈ ಅಂಕಿಅಂಶಗಳು ಭಯಾನಕ ಚಿತ್ರವನ್ನು ಚಿತ್ರಿಸುತ್ತವೆ:
- ಸುಮಾರು 1,500 ಕಾಶ್ಮೀರಿ ಪಂಡಿತರು (ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ) ಕ್ರೂರವಾಗಿ ಕೊಲ್ಲಲ್ಪಟ್ಟರು.
- 90,000ಕ್ಕೂ ಹೆಚ್ಚು ಪಂಡಿತರು ತಮ್ಮ ಮನೆಗಳು, ವ್ಯವಹಾರಗಳು ಮತ್ತು ಪೂರ್ವಜರ ಪರಂಪರೆಯನ್ನು ತ್ಯಜಿಸಿ ಪಲಾಯನ ಮಾಡಿದರು.
- 500ಕ್ಕೂ ಹೆಚ್ಚು ದೇವಾಲಯಗಳು ಸುಟ್ಟುಹಾಕಲ್ಪಟ್ಟವು ಅಥವಾ ಧ್ವಂಸಗೊಂಡವು.
- 20,000ಕ್ಕೂ ಹೆಚ್ಚು ಮನೆಗಳು, ವ್ಯವಹಾರಗಳು ಮತ್ತು ಭೂಮಿಗಳು ನಾಶಪಡಿಸಲ್ಪಟ್ಟವು ಅಥವಾ ಆಕ್ರಮಿಸಲ್ಪಟ್ಟವು.
ಆ ರಾತ್ರಿ ಕಣಿವೆಯಾದ್ಯಂತ ಧ್ವನಿವರ್ಧಕಗಳಿಂದ ಬೆದರಿಕೆಗಳು, ಕೋಮು ಘೋಷಣೆಗಳು ಮೊಳಗಿದವು ಮತ್ತು ಹಿಂಸಾಚಾರದ ವಾತಾವರಣ ಸೃಷ್ಟಿಯಾಯಿತು. ಸತತ ಕೊಲೆಗಳು, ಅಪಹರಣಗಳು, ಚಿತ್ರಹಿಂಸೆಗಳು ಸಾವಿರಾರು ಕುಟುಂಬಗಳನ್ನು ರಾತ್ರೋರಾತ್ರಿ ಪಲಾಯನ ಮಾಡುವಂತೆ ಮಾಡಿದವು. ಆಡಳಿತ ಕುಸಿದಿತ್ತು, ಭದ್ರತೆ ಇರಲಿಲ್ಲ – ಶೀತಲ ರಾತ್ರಿಗಳಲ್ಲಿ, ಕತ್ತಲೆಯ ರಸ್ತೆಗಳಲ್ಲಿ ಶಿಶುಗಳು ಮತ್ತು ವೃದ್ಧರನ್ನು ಹೊತ್ತುಕೊಂಡು ಅನಿಶ್ಚಿತ ಭವಿಷ್ಯದತ್ತ ಕಾಶ್ಮೀರಿ ಪಂಡಿತರು ಸಾಗಿದರು.
ಜನವರಿ 19ರಂದು ಪ್ರಾರಂಭವಾದ ಈ ಸಾಮೂಹಿಕ ವಲಸೆ ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ಆಳವಾದ ಗಾಯವನ್ನುಂಟು ಮಾಡಿದ ಘಟನೆ – ಇದು ಇಂದಿಗೂ ಭಯಾನಕ ದೃಶ್ಯವಾಗಿ, ಮರೆಯಲಾಗದ ಸಂಕಟವಾಗಿ ಉಳಿದಿದೆ. ಇದು ಮಾನವನ ಅಪರಿಮಿತ ನೋವು, ಭಯಾನಕ ದೌರ್ಜನ್ಯಗಳು ಮತ್ತು ಪ್ರಾಚೀನ ಸಮುದಾಯದ ಬೇರುಗಳನ್ನು ಕಳೆದುಕೊಂಡ ನೋವಿನ ಸ್ಮರಣೆಯಾಗಿ ಉಳಿದುಹೋಗಿದೆ.
ಇಂದಿನ ಪೀಳಿಗೆ ಈ ಘಟನೆಯನ್ನು ತಿಳಿದುಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಮತ್ತು ನೆನಪಿಸಿಕೊಳ್ಳುವುದು ಅತ್ಯಗತ್ಯ – ಏಕೆಂದರೆ ಇತಿಹಾಸವನ್ನು ಮರೆತುಬಿಟ್ಟರೆ ಅದು ಮತ್ತೆ ಮರುಕಳಿಸಬಹದು. ಇತಿಹಾಸದಿಂದ ಕಲಿತ ಪಾಠವೊಂದೇ ನಮ್ಮನ್ನು ಭವಿಷ್ಯದ ಭಯಾನಕತೆಗಳಿಂದ ರಕ್ಷಿಸಬಲ್ಲದು. ನ್ಯಾಯಕ್ಕಾಗಿ, ಜಾಗೃತಿಗಾಗಿ, ಮಾನವೀಯತೆಗಾಗಿ ಈ ಕಥೆಯನ್ನು ಹಂಚಿಕೊಳ್ಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


