ಧರ್ಮಶಾಲಾ: ಭಾರತ ತಂಡ ಆಸ್ಟ್ರೇಲಿಇಯಾವನ್ನು ಮಣಿಸುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲ್ ಆಫ್ ಫೇಮರ್ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ರಾಜದಂಡ ಮತ್ತು 1 ಮಿಲಿನ್ ಡಾಲರ್ ಬಹುಮಾನ ಚೆಕ್ ಪ್ರದಾನ ಮಾಡಿದ್ದಾರೆ.
ಎಂಆರ್ಎಫ್ ಟೈರ್ಸ್ ಟೆಸ್ಟ್ ರ್ಯಾಂಕಿಂಗ್ನ ಎಪ್ರಿಲ್ 1ರ ವರ್ಷಾಂತ್ಯದ ಕಟ್-ಆಫ್ ದಿನದೊಳಗೆ ಭಾರತ ತಂಡ ಈ ಸಾಧನೆ ಮಾಡಿದ್ದು, ಈ ಪ್ರಶಸ್ತಿಗೆ ಪಾತ್ರವಾಗಿದೆ. 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ 3-0 ಅಂತರದ ಜಯ ದಾಖಲಿಸಿದ ಭಾರತ, ಪಾಕಿಸ್ಥಾನವನ್ನು ಹಿಂದಿಕ್ಕುವ ಮೂಲಕ ನಂ.1 ಸ್ಥಾನಕ್ಕೇರಿತ್ತು. ಅನಂತರ ಭಾರತ ಈವರೆಗೆ ಭಾರತ ತಂಡ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ.
ನ್ಯೂಜಿಲ್ಯಾಂಡ್ ಸರಣಿಯ ಬಳಿಕ ಇಂಗ್ಲೆಂಡ್ ವಿರುದ್ಧ 4-0 ಸರಣಿ ಜಯ, ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ 208 ರನ್ ಜಯ, ಬಳಿಕ ಈಗ ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ ಸಾಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.