ಮೆಲ್ಬೋರ್ನ್: ಚುನಾವಣೆಯಲ್ಲಿ ಗೆದ್ದಿರುವ ಭಾರತೀಯ ಮೂಲದ ಡೇನಿಯಲ್ ಮೂಖೇ ಅವರು ಮಂಗಳವಾರ ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿ ಆಸ್ಟ್ರೇಲಿಯಾ ಸಂಸತ್ತು ಪ್ರವೇಶಿಸಿದ್ದಾರೆ. ಈ ಮೂಲಕ ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಮೊದಲ ರಾಜಕಾರಣಿ ಎನಿಸಿಕೊಂಡಿದ್ದಾರೆ.
32 ವರ್ಷದ ಮೂಖೇ ಅವರು ನ್ಯೂ ಸೌತ್ ವಾಲ್ಸ್ ಅಪ್ಪರ್ ಹೌಸ್ಗೆ ಕಾರ್ಮಿಕರಿಂದ ಆಯ್ಕೆಗೊಂಡಿದ್ದಾರೆ. ಈ ಮೂಲಕ ಇವರು ಭಾರತೀಯ ಮೂಲದ ಮೊದಲ ರಾಜಕಾರಣಿ ಎನಿಸಿಕೊಂಡಿದ್ದಾರೆ.
‘ಇದೊಂದು ಅದ್ಭುತ ಗೌರವ, ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಮೊದಲ ರಾಜಕಾರಣಿಯಾಗಿ ಪುನೀತಗೊಂಡಿದ್ದೇನೆ. ಗೀತೆಯು ಬೈಬಲ್, ಕುರಾನಿನಂತೆ ಈ ಜಗತ್ತಿನ ಒಂದು ಶ್ರೇಷ್ಠ ಧಾರ್ಮಿಕ ಪುಸ್ತಕ’ ಎಂದು ಡೇನಿಯಲ್ ಹೇಳಿದ್ದಾರೆ.
1973ರಲ್ಲಿ ಮೂಖೇ ಅವರ ಪೋಷಕರು ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.