ವ್ಯವಹಾರ-ವಾಕ್ಯಾನಿ – ವ್ಯವಹಾರ ವಾಕ್ಯಗಳು
व्यवहारवाक्यानि – ವ್ಯವಹಾರ ವಾಕ್ಯಾನಿ – ವ್ಯವಹಾರ ವಾಕ್ಯಗಳು..
नमो नमः / नमस्ते / प्रणामाः – ನಮೋ ನಮಃ / ನಮಸ್ತೇ / ಪ್ರಣಾಮಾಃ – ನಮಸ್ಕಾರ
सुप्रभातम् – ಸುಪ್ರಭಾತಮ್ – ಶುಭಮುಂಜಾನೆ
शुभमध्याह्नः – ಶುಭಮಧ್ಯಾಹ್ನಃ – ಶುಭ ಮಧ್ಯಾಹ್ನ
शुभसायम् – ಶುಭಸಾಯಮ್ – ಶುಭಸಂಜೆ
शुभरात्रिः – ಶುಭರಾತ್ರಿಃ – ಶುಭರಾತ್ರಿ
कृपया – ಕೃಪಯಾ – ದಯವಿಟ್ಟು
धन्यवादः – ಧನ್ಯವಾದಃ – ಧನ್ಯವಾದ
अस्तु – ಅಸ್ತು – ಆಗಲಿ
मास्तु – ಮಾಸ್ತು – ಬೇಡ
आम् – ಆಮ್ – ಹೌದು
न – ನ – ಇಲ್ಲ
पुनः मिलामः – ಪುನಃ ಮಿಲಾಮಃ – ಪುನಃ ಸಿಗೋಣ
शुभं भूयात् – ಶುಭಂ ಭೂಯಾತ್ – ಒಳ್ಳೆಯದಾಗಲಿ
शोभनम् – ಶೋಭನಮ್ – ಚೆನ್ನಾಗಿದೆ
पुनः – ಪುನಃ – ಮತ್ತೊಮ್ಮೆ
क्षम्यताम् – ಕ್ಷಮ್ಯತಾಂ – ಕ್ಷಮಿಸಿ
हरिः ओम् – ಹರಿಃ ಓಂ – ಹಲೋ
सुस्वागतम् – ಸುಸ್ವಾಗತಮ್ – ಸುಸ್ವಾಗತ
सुदिनमस्तु – ಸುದಿನಮಸ್ತು – ಶುಭದಿನವಾಗಲಿ
त्वं कथम् असि ? – ತ್ವಂ ಕಥಂ ಅಸಿ ? – ನೀನು ಹೇಗಿದ್ದೀಯಾ..?
शुभम् – ಶುಭಮ್ – ಶುಭವಾಗಲಿ
हार्दिकाः शुभेच्छाः – ಹಾರ್ದಿಕಾಃ ಶುಭೇಚ್ಛಾಃ – ಹಾರ್ದಿಕ ಶುಭಕಾಮನೆಗಳು
कुशलम् सर्वम् ? – ಕುಶಲಮ್ ಸರ್ವಮ್ ? – ಎಲ್ಲವೂ ಚೆನ್ನಾಗಿದೆಯಾ..?
सुष्ठु – ಸುಷ್ಠು – ಓ.ಕೆ
दीर्घायुरारोग्यमस्तु – ದೀರ್ಘಾಯುರಾರೋಗ್ಯಮಸ್ತು – ದೀರ್ಘವಾದ ಆಯುಷ್ಯ ಹಾಗೂ ಆರೋಗ್ಯ ಸಿಗಲಿ
सुयशः भवतु – ಸುಯಶಃ ಭವತು – ಯಶಸ್ಸು ಸಿಗಲಿ
विजयः भवतु – ವಿಜಯಃ ಭವತು – ವಿಜಯವಾಗಲಿ
जन्मदिनशुभेच्छाः – ಜನ್ಮದಿನಶುಭೇಚ್ಛಾಃ – ಜನ್ಮದಿನದ ಶುಭಾಶಯಗಳು
अखण्डसौभाग्यमस्तु – ಅಖಂಡಸೌಭಾಗ್ಯಮಸ್ತು – ಅಖಂಡವಾದ ಸೌಭಾಗ್ಯ ಸಿಗಲಿ.
महोदय – ಮಹೋದಯ – ಸರ್
महोदया – ಮಹೋದಯಾ – ಮೇಡಮ್
शुभमस्तु – ಶುಭಮಸ್ತು – ಶುಭವಾಗಲಿ
सौभाग्यवती भवतु – ಸೌಭಾಗ್ಯವತೀ ಭವತು – ಸೌಭಾಗ್ಯಶಾಲಿಯಾಗು (ಸ್ತ್ರೀಯರಿಗೆ)
*****************
ಈ ದಿನದ ಸುಭಾಷಿತ
“सर्वतीर्थमयी माता सर्वदेवमय: पिता |
मातरं पितरं तस्मात् सर्वयत्नेन पूजयेत् ||”
“ಸರ್ವತೀರ್ಥಮಯೀ ಮಾತಾ ಸರ್ವದೇವಮಯಃ ಪಿತಾ |
ಮಾತರಂ ಪಿತರಂ ತಸ್ಮಾತ್ ಸರ್ವಯತ್ನೇನ ಪೂಜಯೇತ್ ||”
ಭಾವಾರ್ಥ – ತಾಯಿ ಸರ್ವತೀರ್ಥಗಳ ಸ್ವರೂಪ. ತಂದೆ ಸರ್ವದೇವತೆಗಳ ಸ್ವರೂಪ. ಆದ್ದರಿಂದ ನಮ್ಮ ತಂದೆ ಹಾಗೂ ತಾಯಿಗೆ ಸರ್ವಯತ್ನಗಳಿಂದ ಪೂಜ್ಯಸ್ಥಾನವನ್ನು ನೀಡಬೇಕೆಂದು ಈ ಸುಭಾಷಿತ ತಿಳಿಸುತ್ತದೆ.
ಪುನಃ ಮಿಲಾಮಃ
“ಶುಭಂ ಭೂಯಾತ್”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.