ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖ್ದೇವ್ ಅವರು ಹುತಾತ್ಮರಾದ ಮಾ.23ನ್ನು ದೇಶದಾದ್ಯಂತ ಬಲಿದಾನ್ ದಿವಸ್ ಆಗಿ ಆಚರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಈ ಮೂರು ಕ್ರಾಂತಿಕಾರಿಗಳಿಗೆ ನಮನಗಳನ್ನು ಸಲ್ಲಿಸಿದ್ದು, ಅವರ ಸಾಹಸ ಮತ್ತು ಬಲಿದಾನವನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
1931ರ ಮಾರ್ಚ್ 23ರಂದು ಲಾಹೋರ್ ಜೈಲಿನಲ್ಲಿ ಇವರನ್ನು ನೇಣಿಗಂಬಕ್ಕೆ ಏರಿಸಲಾಯಿತು.
ಈ ಸಮಯದಲ್ಲಿ ಭಗತ್ ಸಿಂಗ್ ಕೇವಲ 23 ವರ್ಷದವರಾಗಿದ್ದರು, ಪಂಜಾಬ್ನ ಫೈಸಲಾಬಾದ್ ಜಿಲ್ಲೆಯ ಬಂಗಾ ಗ್ರಾಮದಲ್ಲಿ 1907ರಲ್ಲಿ ಇವರು ಜನಿಸಿದ್ದರು.
ಪಂಜಾಬ್ನಲ್ಲಿ ಈ ದಿನವನ್ನು ಬಲಿದಾನ್ ದಿವಸ್ ಆಗಿ ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.