ವಾರಣಾಸಿ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬೆದರಿಕೆಯೊಡ್ಡಿರುವ ಪತ್ರವೊಂದು ವಾರಣಾಸಿಯ ಮಿರ್ಜಾಮುರದ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇದನ್ನು ಇಸಿಸ್ ಉಗ್ರ ಸಂಘಟನೆ ಬರೆದಿದೆ ಎನ್ನಲಾಗಿದೆ.
ಇಸಿಸ್ನ ಸಹಿ ಈ ಪತ್ರದಲ್ಲಿ ಇದ್ದು ’ಪಾಕಿಸ್ಥಾನ ಜಿಂದಾಬಾದ್’ ಎಂಬ ಘೋಷಣೆಯನ್ನೂ ಬರೆಯಲಾಗಿದೆ.
ಅಲ್ಲದೇ ‘ಮಾ.24ರಂದು ಪೂರ್ವಾಂಚಲಕ್ಕೆ ಎದುರಾಗುವ ಅಪಾಯವನ್ನು ನಿಲ್ಲಿಸಿ’ ಎಂದು ಯೋಗಿ ಆದಿತ್ಯನಾಥರಿಗೆ ಸಾವಾಲೊಡ್ಡಿದೆ.
ಇದೀಗ ಪೊಲೀಸರು, ಗುಪ್ತಚರ ಇಲಾಖೆ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿವೆ. ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರದಲ್ಲಿ ಪತ್ರ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಮೋದಿ, ಮನೋಹರ್ ಪರಿಕ್ಕರ್ ಅವರನ್ನು ಕೊಲ್ಲುತ್ತೇವೆ ಎಂಬ ಇಸಿಸ್ ಪತ್ರ ಪತ್ತೆಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.