ಜೈಪುರ: 2007ರ ಅಜ್ಮೇರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ ಜೈಪುರದಲ್ಲಿನ ವಿಶೇಷ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ದೇವೇಂದ್ರ ಗುಪ್ತಾ ಮತ್ತು ಭವೇಶ್ ಪಟೇಲ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾ.೮ರಂದು ಈ ಇಬ್ಬರು ಮತ್ತು ಸುನೀಲ್ ಜೋಶಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಸ್ವಾಮಿ ಅಸೀಮಾನಂದರನ್ನು ದೋಷಮುಕ್ತಗೊಳಿಸಿತ್ತು. ಜೋಶಿ ಈಗಾಗಲೇ ಸಾವನ್ನಪ್ಪಿದ್ದಾರೆ.
ಅಪರಾಧಿಗಳಿಗೆ ಸೆಕ್ಷನ್ 120(ಬಿ) ಕ್ರಿಮಿನಲ್ ಕುತಂತ್ರ, 295-ಎ (ದುರುದ್ದೇಶ ಮತ್ತು ಉದ್ದೇಶಪೂರ್ವಕ ಅಪರಾಧ, ಧರ್ಮ, ಧಾರ್ಮಿಕ ನಂಬಿಕೆಗೆ ಅವಮಾನ)ಅಡಿ ಸಜೆ ವಿಧಿಸಲಾಗಿದೆ.
2007 ಅಕ್ಟೋಬರ್ 11ರಂದು ಇಫ್ತಾರ್ ವೇಳೆ ಅಜ್ಮೇರ್ ದರ್ಗಾ ಸ್ಫೋಟ ಸಂಭವಿಸಿತ್ತು. ಈ ವೇಳೆ ೩ ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.