ನವದೆಹಲಿ: ಏರ್ ಇಂಡಿಯಾ ತನ್ನ ಎ-320 ವಿಮಾನಗಳಲ್ಲಿ ಪ್ರಯಾಣಿಸುವ ದೇಶೀಯ ಪ್ರಯಾಣಿಕರಿಗೆ ಉಚಿತ ವೈಫೈ ನೀಡಲು ಯೋಜಿಸುತ್ತಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.
ಒಂದು ವೇಳೆ ಇದು ಜಾರಿಗೆ ಬಂದಲ್ಲಿ ಏರ್ ಇಂಡಿಯಾ ಉಚಿತ ವೈಫೈ ನೀಡುವ ಮೊದಲ ವಿಮಾನಯಾನ ಸಂಸ್ಥೆ ಎನಿಸಿಕೊಳ್ಳಲಿದೆ.
ಆದಾಗ್ಯೂ ರಾಷ್ಟ್ರೀಯ ವಾಹಕ ಏರ್ ಇಂಡಿಯಾ ತಾನು ಒದಗಿಸಬಹುದಾದ ಡಾಟಾ ಮಿತಿ ಮತ್ತು ಡಾಟಾ ವೇಗದ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ವರದಿ ತಿಳಿಸಿದೆ.
ಏರ್ ಇಂಡಿಯಾದ ಉಚಿತ ವೈಫೈ ಸೇವೆ ಮೂಲ ಪ್ಯಾಕ್ ಜೊತೆ ಆರಂಭಗೊಳ್ಳಲಿದೆ. ಇದು ಪ್ರಯಾಣಿಕರಿಗೆ ಇ-ಮೇಲ್, ವಾಟ್ಸ್ಆಪ್ ಸಂದೇಶ ಕಳುಹಿಸಲು ಅನುಮತಿಸಲಿದೆ. ಏರ್ ಇಂಡಿಯಾ ನಂತರದಲ್ಲಿ ಶುಲ್ಕ ಪಾವತಿಯೊಂದಿಗೆ ಹೆಚ್ಚಿನ ಡಾಟಾ ಮಿತಿ ಇರುವ ಪ್ಯಾಕ್ ಒದಗಿಸುವ ಸಾಧ್ಯತೆ ಇದೆ. ಇದು ಗ್ರಾಹಕರ ಪ್ರತಿಕ್ರತಿಯೆಗಳ ಆಧಾರದಲ್ಲಿ ನಡೆಯಲಿದೆ.
ಏರ್ ಇಂಡಿಯಾ ವೈಫೈ ಪ್ರಕ್ರಿಯೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಅಳವಡಿಸಲು ವಿಮಾನ ತಯಾರಕರ ಅನುಮತಿ ಪಡೆಯಲಿದ್ದೇವೆ ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೋಹಾನಿ ತಿಳಿಸಿದ್ದಾರೆ.