×
Home About Us Advertise With s Contact Us

ಯಾದವ್, ಭೂಷಣ್ ಎಎಪಿಯಿಂದ ಉಚ್ಛಾಟನೆ?

YADAನವದೆಹಲಿ: ಎಎಪಿಯಲ್ಲಿನ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದೆ. ಅಧಿಕಾರದ ಗದ್ದುಗೆ ಹಿಡಿದು ಒಂದು ತಿಂಗಳು ಕಳಯುವಷ್ಟರಲ್ಲೇ ಪಕ್ಷ ಇಬ್ಭಾಗವಾಗಿದೆ. ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿ ಎತ್ತಿದ ನಾಯಕರುಗಳಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು ಎಎಪಿ ನಿರ್ಧರಿಸಿದೆ ಎನ್ನಲಾಗಿದೆ.

ಈ ಇಬ್ಬರು ನಾಯಕರುಗಳು ತಾವಾಗಿಯೇ ಇಮೇಲ್ ಮೂಲಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಆದರೆ ಈ ಇಬ್ಬರು ನಾಯಕರು ಅದನ್ನು ಅಲ್ಲಗೆಳೆದಿದ್ದಾರೆ.

ನಾಳೆ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದ್ದು ಇಲ್ಲಿ ಈ ಇಬ್ಬರು ಮುಖಂಡರು ಉಚ್ಛಾಟನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಯಾದವ್ ಮತ್ತು ಭೂಷಣ್ ಇಂದು ಪ್ರತಿಕಾಗೋಷ್ಠಿಯನ್ನು ಕರೆದು ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.

Tags: ,

 

Recent News

Back To Top
error: Content is protected !!