ಯಾವುದೇ ಒಂದು ಭಾಷೆಯನ್ನು ಕಲಿಯಲು ಪದಗಳ ಜ್ಞಾನ ಅತ್ಯಗತ್ಯ. ಹೆಚ್ಚು ಪದಗಳನ್ನು ಕಲಿಯುತ್ತಾ ಹೋದಂತೆ ಭಾಷಾಕಲಿಕೆ ಸುಗಮವಾಗುತ್ತದೆ. ಹಾಗಾಗಿ ಯಾವುದೇ ಭಾಷೆಯನ್ನು ಕಲಿಯುವ ಮುನ್ನ ಆ ಭಾಷೆಯಲ್ಲಿನ ಶಬ್ದಗಳನ್ನು ಅಧಿಕವಾಗಿ ತಿಳಿಯಲು ಯತ್ನಿಸಬೇಕು. ಆದ್ದರಿಂದ ಸಂಸ್ಕೃತದಲ್ಲಿ ಫಲ, ಪುಷ್ಪ, ತರಕಾರಿ, ಬಣ್ಣ ಮುಂತಾದವುಗಳ ಹೆಸರನ್ನು ತಿಳಿಸುತ್ತಿದ್ದೇನೆ. ನನ್ನ ಪ್ರಯತ್ನ ಸಾರ್ಥಕವಾಗಬೇಕಾದರೆ ಈ ಎಲ್ಲ ಶಬ್ದಗಳನ್ನು ಪುನಃ ಪುನಃ ಓದಿ ಹಾಗೂ ಅಭ್ಯಾಸ ಮಾಡಿ. ನಿಮ್ಮ ಗೆಳೆಯರೊಂದಿಗೂ ಹಂಚಿಕೊಳ್ಳಿ. ಏಕೆಂದರೆ ಸಂಸ್ಕೃತವನ್ನು ಕಲಿಯಲು ಆಸಕ್ತಿಯಿರುವ ಅನೇಕ ಸ್ನೇಹಿತರಿದ್ದಾರೆ. ಎಲ್ಲರಿಗೂ ಈ ಲೇಖನ ತಲುಪಲಿ ಹಾಗೂ ಸಹಕಾರಿಯಾಗಲಿ ಎಂಬುದು ನನ್ನ ಅಭಿಲಾಷೆ.
फलानां नामानि – ಫಲಾನಾಂ ನಾಮಾನಿ – ಹಣ್ಣುಗಳ ಹೆಸರುಗಳು
बीजपूरः – ಬೀಜಪೂರಃ – ಪೇರಳೆಹಣ್ಣು
उर्वारुकः – ಉರ್ವಾರುಕಃ – ಕರ್ಬೂಜ
कलिङ्गः – ಕಲಿಂಗಃ – ಕಲ್ಲಂಗಡಿ ಹಣ್ಣು
कपित्थ: – ಕಪಿತ್ಥಃ – ಬೇಲದ ಹಣ್ಣು
जम्बूफलम् – ಜಂಬೂಫಲಮ್ – ಪನ್ನೇರಳೆ ಹಣ್ಣು
नारङ्गम् – ನಾರಂಗಮ್ – ಕಿತ್ತಳೆ ಹಣ್ಣು
कदलीफलम् – ಕದಲೀಫಲಮ್ – ಬಾಳೆಹಣ್ಣು
पनसफलम् – ಪನಸಫಲಮ್ – ಹಲಸಿನ ಹಣ್ಣು
मधुकर्कटी – ಮಧುಕರ್ಕಟೀ – ಪಪ್ಪಾಯಿ ಹಣ್ಣು
द्राक्षाफलम् – ದ್ರಾಕ್ಷಾಫಲಮ್ – ದ್ರಾಕ್ಷಿ ಹಣ್ಣು
जम्बीरम् – ಜಂಬೀರಮ್ – ಲಿಂಬೆಹಣ್ಣು
सेवफलम् / काश्मीरफलम् / स्वादुफलम् – ಸೇವಫಲಮ್ / ಕಾಶ್ಮೀರಫಲಮ್ / ಸ್ವಾದುಫಲಮ್ – ಸೇಬು
अनानासम् – ಅನಾನಸಮ್ – ಅನಾನಸ್
दाढिमफलम् – ದಾಢಿಮಫಲಮ್ – ದಾಳಿಂಬೆ ಹಣ್ಣು
आम्रम् – ಆಮ್ರಮ್ – ಮಾವಿನಹಣ್ಣು
पुष्पाणां नामानि – ಪುಷ್ಪಾಣಾಂ ನಾಮಾನಿ – ಹೂವುಗಳ ಹೆಸರುಗಳು
सूर्यकमलः / सूर्यकान्तिः – ಸೂರ್ಯಕಮಲಮ್ / ಸೂರ್ಯಕಾಂತಿಃ – ಸೂರ್ಯಕಾಂತಿ
मृणालिनी / किञ्जल / पद्म / अरविन्दः / पङ्कजः / कमलम् / उत्पलम् /
सरसिजः / अब्जः / अम्बुजः – ಮೃಣಾಲಿನೀ / ಕಿಂಚಲ / ಪದ್ಮ / ಪಂಕಜಃ / ಕಮಲಮ್ /
ಉತ್ಪಲಮ್ / ಸರಸಿಜಃ / ಅಬ್ಜಃ / ಅಂಬುಜಃ – ಕಮಲ
कुमुदम् / पद्मिनी / जल-नलिनी – ಕುಮುದಮ್ / ಪದ್ಮಿನೀ / ಜಲನಲಿನೀ – ಜಲ ನೈದಿಲೆ
कुवलयः – ಕುವಲಯಃ – ನೀಲಿ ಜಲ ನೈದಿಲೆ
जवा / जपा – ಜವಾ / ಜಪಾ – ಗುಲಾಬಿ
कुन्दः / मल्लिका / मालती / पारिजातः – ಕುಂದಃ / ಮಲ್ಲಿಕಾ / ಮಾಲತೀ /ಪಾರಿಜಾತಃ – ಮಲ್ಲಿಗೆ
कर्णोरः – ಕರ್ಣೋರಃ – ಕಣಗಿಲೆ
श्रीखण्डम् – ಶ್ರೀಖಂಡಮ್ – ಶ್ರೀಗಂಧ
चम्पकम् – ಚಂಪಕಮ್ – ಸಂಪಿಗೆ
शाकानां नामानि – ಶಾಕಾನಾಂ ನಾಮಾನಿ – ತರಕಾರಿಗಳ ಹೆಸರುಗಳು
कारबेल्लम् – ಕಾರಬೆಲ್ಲಮ್ – ಹಾಗಲಕಾಯಿ
पालङ्गशाकः – ಪಾಲಂಗಶಾಕಃ – ಬೀಟ್ ರೂಟ್
वृन्ताकम् – ವೃಂತಾಕಮ್ – ಬದನೆ ಕಾಯಿ
गृञ्जनम् – ಗೃಂಜನಮ್ – ಕ್ಯಾರೆಟ್
मरीचम् – ಮರೀಚಮ್ – ಮೆಣಸಿನಕಾಯಿ
गोजिह्वा – ಗೋಜಿಹ್ವಾ – ಹೂ ಕೋಸು
पटोलः – ಪಟೋಲಃ – ಸವತೆ ಕಾಯಿ
लशुनम् – ಲಶುನಮ್ – ಬೆಳ್ಳುಳ್ಳಿ
आर्द्रकम् – ಆರ್ದೃಕಮ್ – ಶುಂಠಿ
अलाबूः -ಅಲಾಬೂಃ – ಸೋರೆ ಕಾಯಿ
भिण्डिका – ಭಿಂಡಿಕಾ – ಬೆಂಡೆ ಕಾಯಿ
पलाण्डुः – ಪಲಾಂಡುಃ – ಈರುಳ್ಳಿ
आलुकः – ಆಲುಕಃ – ಆಲೂಗಡ್ಡೆ
कलायः – ಕಲಾಯಃ – ಬಟಾಣಿ
कूष्माण्डः – ಕೂಷ್ಮಾಂಡಃ – ಕುಂಬಳಕಾಯಿ
मूलिका – ಮೂಲಿಕಾ – ಮೂಲಂಗಿ
हिण्डीरः – ಹಿಂಡೀರಃ – ಟೊಮೆಟೋ
वर्णानां नामानि – ವರ್ಣಾನಾಂ ನಾಮಾನಿ – ಬಣ್ಣಗಳ ಹೆಸರುಗಳು
लोहितः, रक्तवर्णः – ಲೋಹಿತಃ / ರಕ್ತವರ್ಣಃ – ಕೆಂಪು
हरितः, पलाशः – ಹರಿತಃ / ಪಲಾಶಃ – ಹಸಿರು
नीलः – ನೀಲಃ – ನೀಲಿ
श्यामः, कालः – ಶ್ಯಾಮಃ / ಕಾಲಃ – ಕಪ್ಪು
शुक्लः, श्वेतः – ಶುಕ್ಲಃ / ಶ್ವೇತಃ – ಬಿಳಿ
धूसरः, धूषरः – ಧೂಸರಃ / ಧೂಷರಃ – ಬೂದು
श्यावः, कपिशः – ಶ್ಯಾವಃ / ಕಪಿಶಃ – ಕಂದು
पाटलः, श्वेतरक्तः – ಪಾಟಲಃ / ಶ್ವೇತರಕ್ತಃ – ಗುಲಾಬಿ
पीतः, हरिद्राभः – ಪೀತಃ / ಹರಿದ್ರಾಭಃ – ಹಳದಿ
कौसुम्भः, नारङगवर्णः – ಕೌಸ್ತುಭಃ / ನಾರಂಗವರ್ಣಃ – ಕಿತ್ತಳೆ ಬಣ್ಣ
शोणः – ಶೋಣಃ – ಕಡುಗೆಂಪು
अरुणः – ಅರುಣಃ – ಕೆಂಪುಕಂದು
सुभाषितम् – ಸುಭಾಷಿತಮ್
“अधिगत्य गुरोर्ज्ञानम्
छात्रेभ्यो वितरन्ति ये ।
विद्यावात्सल्यनिधयः
शिक्षका मम दैवतम् ॥”
“ಅಧಿಗತ್ಯ ಗುರೋರ್ಜ್ಞಾನಮ್
ಛಾತ್ರೇಭ್ಯೋ ವಿತರಂತಿ ಯೇ |
ವಿದ್ಯಾವಾತ್ಸಲ್ಯನಿಧಯಃ
ಶಿಕ್ಷಕಾ ಮಮ ದೈವತಮ್||”
ಭಾವಾರ್ಥಃ – ಯಾರು ತಮ್ಮ ಗುರುಗಳಿಂದ ವಿದ್ಯೆಯನ್ನು ಕಲಿತು ವಿದ್ಯಾರ್ಥಿಗಳಿಗೆ ಹಂಚುತ್ತಾರೋ ಹಾಗೂ ಯಾರು ವಿದ್ಯೆ ಹಾಗೂ ವಾತ್ಸಲ್ಯದ ನಿಧಿಯಾಗಿದ್ದಾರೋ ಅಂತಹ ಶಿಕ್ಷಕರು ನನಗೆ ದೈವಸ್ವರೂಪರೇ ಆಗಿದ್ದಾರೆ.
“ಶುಭಂ ಭೂಯಾತ್”
“ಪುನಃ ಮಿಲಾಮಃ”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.