ಬೆಂಗಳೂರು: ಬಹುನಿರೀಕ್ಷಿತವಾಗಿದ್ದ ರೈತರ ಸಾಲ ಮನ್ನಾ ಮಾಡಲು ಸಿ.ಎಂ. ಸಿದ್ದರಾಮಯ್ಯ ಹಿಂದೇಟು ಹಾಕಿದ್ದು, ಅವರ ಈ ನಡೆ ರೈತರ ಅಸಮಾಧಾನಕ್ಕೆ ಕಾರಣವಾಗಬಹುದು.
ಮೊದಲೇ ಬರದಿಂದ ಬಳಲುತ್ತಿರುವ ರೈತರು ಬದುಕಿಗಾಗಿ ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಸಾಲವಾದರೂ ಮನ್ನಾ ಆಗಿದ್ದರೆ ತುಸು ನಿರಾಳ ಆಗಬಹುದಿತ್ತು. ಆದರೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ಸಾಲ ನೀಡುವಿಕೆಯನ್ನು ಮುಂದುವರಿಸಲಾಗಿದೆ.
ಆತ್ಮಹತ್ಯೆಗೆ ಶರಣಾದ ರೈತರ ಪತ್ನಿಗೆ 2 ಸಾವಿರ ಪಿಂಚಣಿ ಕೊಡುವುದಾಗಿ ಘೋಷಿಸುವ ಮೂಲಕ, ರೈತರನ್ನು ಒಲಿಸಲು ಪ್ರಯತ್ನಿಸಿದ್ದರೂ ಸಾಲ ಮನ್ನಾ ಮಾಡದಿರುವುದು ರೈತರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.